ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ - ಹೆಚ್ಚಿನ ಮಾಹಿತಿಗೆ |

ಹಿನ್ನೆಲೆ

ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ಸ್ಥಾಪಿತವಾಗಿದ್ದ ರಾಷ್ಟ್ರೀಯ ಸಾಹಿತ್ಯಕ-ಸಾಂಸ್ಕೃತಿಕ ಸಂಸ್ಥೆಯಾದ “ಭಾಷಾ-ಭಾರತಿ”ಯ ಅಂಗವಾಗಿ ಸರ್ಕಾರದ ಆದೇಶ ಸಂಖ್ಯೆ: ಸಂಕಇ/ಕಸಧ /2005 ದಿನಾಂಕ:27.09.2015ರ ಆದೇಶದ ಮೇರೆಗೆ ಸೆಪ್ಟಂಬರ್ 2005ನೇ ತಿಂಗಳಿನಲ್ಲಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತು. ಜನವರಿ 6 2006ರಂದು ಅಂದಿನ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ.ಎನ್.ಧರ್ಮಸಿಂಗ್ ಅವರು ಅಕಾಡೆಮಿಯ ಚಟುವಟಿಕೆಗಳನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳೂ, ಖ್ಯಾತ ಸಾಹಿತಿಗಳು ಹಾಗು ಶ್ರೇಷ್ಟ ಭಾಷಾಂತರಕಾರರೂ ಆಗಿದ್ದ ನಾಡೋಜ ಡಾ.ದೇ.ಜವರೇಗೌಡ ಅವರು ಮತ್ತು ಖ್ಯಾತ ವಿದ್ವಾಂಸರೂ , ಖ್ಯಾತ ವಿಮರ್ಶಕರೂ ಆದ ಪ್ರೊ.ಎಲ್.ಎಸ್.ಶೇಷಗಿರಿರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಇಡಿ ದೇಶದಲ್ಲಿಯೇ ತನ್ನ ಬಗೆಯ ಮೊದಲ ಸಂಸ್ಥೆಯಾಗಿತ್ತು.

ನಂತರದ ದಿನಗಳಲ್ಲಿ ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ/55/ಕರಅ/2009 ದಿನಾಂಕ:30.05.2009 ರ ಪ್ರಕಾರ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಹಾಗು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ವಿಲೀನಗೊಂಡಿದೆ.

 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in