2019ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ : (ಇ-ಪ್ರಕ್ಯೂರ್ ಮೆಂಟ್ ಪೋರ್ಟಲ್ ಮೂಲಕ ಮಾತ್ರ) - ಹೆಚ್ಚಿನ ಮಾಹಿತಿಗೆ | ೨೦೨೦-೨೧ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು ೨೦೧೯ನೇ ಸಾಲಿನ ಪುಸ್ತಕ ಬಹುಮಾನಗಳ ಕುರಿತು - ಹೆಚ್ಚಿನ ಮಾಹಿತಿಗೆ |

ಫೆಲೋಶಿಪ್‌

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕುವೆಂಪು ಅವರ ಬರೆಹಗಳನ್ನು ಕುರಿತು ಅಧ್ಯಯನ ಮಾಡಲು ಹಾಗು ಅವರ ಕೃತಿಗಳನ್ನು ಅನ್ಯ ಭಾರತೀಯ ಭಾಷೆಗಳಿಗೆ ಅನುವಾದ ಮಾಡಲು ಅನುಕೂಲವಾಗುವಂತೆ ಕುವೆಂಪು ಅವರ ಹೆಸರಿನಲ್ಲಿ ಕುವೆಂಪು ಫೆಲೋಷಿಪ್‌ಗಳನ್ನು ನೀಡಲಾಗುತ್ತದೆ.

ಕುವೆಂಪು ಫೆಲೋಷಿಪ್  ನಿಯಮಗಳು

ಫೆಲೋಷಿಪ್‌ನ ಮೊತ್ತ :     ರೂ.5,೦೦,೦೦೦-೦೦   (ರೂಪಾಯಿ ಐದು ಲಕ್ಷ ಮಾತ್ರ)

ಇದರಲ್ಲಿ ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.

 • ಫೆಲೋಷಿಪ್ : 1- ಹಿರಿಯ 1 – ಕಿರಿಯ
 • ಫೆಲೋಷಿಪ್‌ನ ಮೊತ್ತ : ಹಿರಿಯ- 3 ಲಕ್ಷರೂ. & ಕಿರಿಯಗೆ -2 ಲಕ್ಷರೂ.
 • ಫೆಲೋಷಿಪ್ ಆಯ್ಕೆಗೆ ಸಂಬಂಧಿಸಿದಂತೆ ಪ್ರಾಧಿಕಾರದ ವತಿಯಿಂದ ಪತ್ರಿಕಾ ಪ್ರಕಟಣೆಯನ್ನು ಕರೆದು ಅರ್ಜಿಗಳನ್ನು ಸ್ವೀಕರಿಸಿ ಅರ್ಜಿಗಳ ಪರಿಶೀಲನೆ ಮತ್ತು ಸಂದರ್ಶನದ ನಂತರ ಆಯ್ಕೆಯನ್ನು ಆಯ್ಕೆ ಸಮಿತಿಯಲ್ಲಿ ತೀರ್ಮಾನಿಸಲಾಗುತ್ತದೆ.
 • ವಯೋಮಿತಿ : ಕುವೆಂಪು ಫೆಲೋಷಿಪ್ ಆಯ್ಕೆಗೆ ಸಂಬಂಧಿಸಿದಂತೆ ಹಿರಿಯ ಅಧ್ಯಯನಕಾರರಿಗೆ ಕನಿಷ್ಟ ೩೦ ವಯೋಮಿತಿಯನ್ನು ಮತ್ತು ಕಿರಿಯ ಅಧ್ಯಯನಕಾರರಿಗೆ ಆಯ್ಕೆಗೆ ಸಂಬಂಧಿಸಿದಂತೆ ಗರಿಷ್ಠ ೩೦ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
 • ವೇಳಾಪಟ್ಟಿ :    
  • ಮಾರ್ಚ್ ೧೫ - ಪತ್ರಿಕಾ ಪ್ರಕಟಣೆ
  • ಏಪ್ರಿಲ್ ಮೊದಲವಾರ ಅರ್ಜಿ ಸ್ವೀಕೃತಿ
  • ಏಪ್ರಿಲ್ ಕೊನೆಯವಾರ ಆಯ್ಕೆ ಸಮಿತಿಯಿಂದ ಅರ್ಜಿಪರಿಶೀಲನೆ
  • ಮೇ ತಿಂಗಳಿನಲ್ಲಿ ಆಯ್ಕೆ - ವಿಷಯದ ಕುರಿತು ಪ್ರಸ್ತಾವನೆ, ಸಂದರ್ಶನ ಮತ್ತು ಪರಿಶೀಲನೆ
  • ಜೂನ್ ೧ ರಿಂದ ಫೆಲೋಷಿಪ್ ಆಯ್ಕೆ ಜಾರಿ
 • ಫೆಲೋಷಿಪ್‌ಗೆ ಆಯ್ಕೆಯಾದವರು ವಿಷಯಾಧಾರಿತ ಪಠ್ಯವನ್ನು ಬರೆಹರೂಪದಲ್ಲಿ ಮತ್ತು ಉಪನ್ಯಾಸಗಳನ್ನು ನೀಡಬೇಕು.
 • ಜೂನಿಯರ್ ಫೆಲೋ ತಮ್ಮ ಪಠ್ಯವನ್ನು ಬರಹ ರೂಪದಲ್ಲಿ ಸಲ್ಲಿಸಲು ಹಾಗೂ ಸೀನಿಯರ್ ಫೆಲೋ ಅವರು ಬರೆಹರೂಪದ ಜೊತೆಗೆ ಎರಡು ಉಪನ್ಯಾಸಗಳನ್ನು ನೀಡಬೇಕು.
 • ಫೆಲೋಷಿಪ್ ಮೊತ್ತ ಪಾವತಿ : ಫೆಲೋಷಿಪ್‌ಗೆ ಆಯ್ಕೆಯಾದವರಿಗೆ ಮೊದಲಿಗೆ 10% ಮೊತ್ತವನ್ನು ಮುಂಗಡವಾಗಿ ನೀಡಿ, ನಾಲ್ಕು ತಿಂಗಳ ನಂತರ ಮೊತ್ತ 25% ಅನಂತರದ ನಾಲ್ಕು ತಿಂಗಳಿಗೆ 25% ಹಾಗೂ ಕೊನೆಯದಾಗಿ ಸುಮಾರು ಮುದ್ರಿತ 150 ಪುಟಗಳ ಬರೆಹಗಳನ್ನು ಮತ್ತು ಉಪನ್ಯಾಸಗಳನ್ನು ನೀಡಿದ ನಂತರ ಕೊನೆಯ ಕಂತಿನ ಮೊತ್ತ ಉಳಿದ 40% ಮೊತ್ತವನ್ನು ಪಾವತಿಸಲಾಗುತ್ತದೆ.

ಈವರೆಗೆ ಕುವೆಂಪು ಫೆಲೋಷಿಪ್‌ಗೆ ಆಯ್ಕೆಯಾದವರ ವಿವರಗಳು: 

ಕ್ರ.ಸಂ

ವರ್ಷ

ಶ್ರೇಣಿ

ಹೆಸರು

ಸಲ್ಲಿಸಲಾದ ಉಪನ್ಯಾಸ

1

2014-15

ಹಿರಿಯ

ಡಾ.ಕೆ.ಸಿ.ಶಿವಾರೆಡ್ಡಿ, ಕುಪ್ಪಳ್ಳಿ

ಬೇಂದ್ರೆ ಸಾಹಿತ್ಯ ವಿರಾಟ್ ದರ್ಶನ

ಕಿರಿಯ

ಉತ್ಥಾನ ಭಾರಿಘಾಟ್, ಬೆಂಗಳೂರು

ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ

2

2015-16

ಹಿರಿಯ

ಡಾ.ಆರ್.ಚಲಪತಿ ಬೆಂಗಳೂರು

ಕುವೆಂಪು ಬರೆಹಗಳ ಓದಿನ ರಾಜಕಾರಣ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in