ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ಐದು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಹ ಅಭ್ಯರ್ಥಿಗಳಿಂದ ಸೂಕ್ತಪ್ರಸ್ತಾವನೆಗಳನ್ನು ಆಹ್ವಾನಿಸುತ್ತಿದೆ. ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಫೆಲೋಷಿಪ್ಪಿನ ಅಧ್ಯಯನಾವಧಿ 10 ತಿಂಗಳು ನಂತರ ಅಧ್ಯಯನ ವರದಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ.
ಆಸಕ್ತರು ಫೆಲೋಷಿಪ್ಪಿನ ನಿಯಮಗಳು ಮತ್ತು ಅರ್ಜಿನಮೂನೆಯನ್ನು ಪ್ರಾಧಿಕಾರದ ಅಂತರ್ಜಾಲತಾಣ www.kuvempubhashabharathi.orgನಲ್ಲಿ ದಿನಾಂಕ:01.12.2020ರಿಂದ ಪಡೆಯಲು ತಿಳಿಸಿದೆ. ಪ್ರಾಧಿಕಾರದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಅನುವಾದಕ್ಕೆ ಆಯ್ದುಕೊಂಡ ಕೃತಿಯ ಕನಿಷ್ಠ 5 ಪುಟಗಳನ್ನು ಕನ್ನಡಕ್ಕೆ ಅನುವಾದಿಸಿ ಮೂಲ ಭಾಷೆಯ ಪಠ್ಯದೊಂದಿಗೆ ಅಂಚೆ/ಕೋರಿಯರ್ ಮೂಲಕ ಪ್ರಾಧಿಕಾರಕ್ಕೆ ಕಳುಹಿಸಿಕೊಡಲು ಕೋರಿದೆ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ:28.12.2020. ಅಪೂರ್ಣ ಅರ್ಜಿ ಹಾಗು ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in