ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2020ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ | ರಾಷ್ಟ್ರೀಯ ವಿಚಾರಗೋಷ್ಠಿ - ಭಾಷೆ ಮತ್ತು ಸಾಂಸ್ಕೃತಿಕ ವಿನಿಮಯ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ಪಂಗಡದ ನಾಲ್ಕು ಅಭ್ಯರ್ಥಿಗಳಿಗೆ ಫೆಲೋಷಿಪ್ ನೀಡಲು ಅರ್ಜಿ ಅಹ್ವಾನ - ಹೆಚ್ಚಿನ ಮಾಹಿತಿಗೆ |

ಕಿರಿಯ ಕುವೆಂಪು ಫೆಲೋಷಿಪ್ಪುಗಳನ್ನು ನೀಡಲು ಅರ್ಜಿ ಆಹ್ವಾನ

30 Nov 2020 05:19 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದವು ನಾಲ್ಕು ಕಿರಿಯ ಕುವೆಂಪು ಫೆಲೋಷಿಪ್ಪುಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಸೂಕ್ತ ಪ್ರಸ್ತಾವನೆಗಳನ್ನು ಆಹ್ವಾನಿಸುತ್ತಿದೆ. ಕಿರಿಯರ ಫೆಲೋಷಿಪ್ಪಿಗಾಗಿ ವಯೋಮಿತಿ 18 ರಿದ 35 ವರ್ಷಗಳ ಒಳಗಿನವರು. ಫೆಲೋಷಿಪ್ಪಿನ ಮೊತ್ತ ಎರಡು ಲಕ್ಷಗಳು. ಫೆಲೋಷಿಪ್ಪಿನ ಅಧ್ಯಯನಾವಧಿ 10 ತಿಂಗಳು. ನಂತರ ಅಧ್ಯಯನ ವರದಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ. ಆಸಕ್ತರು ಫೆಲೋಷಿಪ್ಪಿನ ನಿಯಮಗಳು ಮತ್ತು ಅರ್ಜಿನಮೂನೆಯನ್ನು ಪ್ರಾಧಿಕಾರದ ಅಂತರ್‌ಜಾಲತಾಣ www.kuvempubhashabharathi.orgನಲ್ಲಿ ದಿನಾಂಕ:01.12.2020 ರಿಂದ ಪಡೆಯಲು ತಿಳಿಸಿದೆ.

ಪ್ರಾಧಿಕಾರದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಂಚೆ/ ಕೋರಿಯರ್ ಮೂಲಕ ಪ್ರಾಧಿಕಾರಕ್ಕೆ ಕಳುಹಿಸಿಕೊಡಲು ಕೋರಿದೆ.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ:28.12.2020. ಅಪೂರ್ಣ ಅರ್ಜಿ ಹಾಗು ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ. 

ಮೊದಲ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಆನ್ ಲೈನ್ ಅಥವಾ ಮುಖತಃ ಸಂದರ್ಶನಕ್ಕೆ ಕರೆಯಲಾಗುವುದು. ಅಭ್ಯರ್ಥಿಗಳು ಸ್ವಂತ ವೆಚ್ಚದಲ್ಲಿ ಸಂದರ್ಶನಕ್ಕೆ ಹಾಜರಾಗುವುದು.  

ವಿಸೂ: ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು 15-12-2020 ರಿಂದ 28-12-2020 ರ ವರೆಗೆ ವಿಸ್ತರಿಸಲಾಗಿದೆ. 

ಕುವೆಂಪು ಫೆಲೋಷಿಪ್ಪಿಗಾಗಿ ಅಧ್ಯಯನ ಮಾಡಬಹುದಾಗಿರುವ ವಲಯಗಳು:

  1. ಕುವೆಂಪು ಅವರ ಬರಹಗಳನ್ನು ಕುರಿತ ಅಧ್ಯಯನಗಳು.
  2. ಕುವೆಂಪು ಅವರ ಕೃತಿಗಳು ಮತ್ತು ಇತರೆ ಕನ್ನಡ ಭಾರತೀಯ ಇಲ್ಲವೇ ಬೇರೆ ದೇಶದ ಬರೆಹಗಾರರ ಕೃತಿಗಳ ತೌಲನಿಕ ಅಧ್ಯಯನ.
  3. ಕುವೆಂಪು ಕೃತಿಗಳನ್ನು ಇತರ ಭಾಷೆಗಳಿಗೆ ಅನುವಾದಿಸುವ ಪ್ರಸ್ತಾವ.
  4. ಕುವೆಂಪು ಅವರ ವೈಚಾರಿಕ ಆಸಕ್ತಿಯ ವಿಷಯಗಳನ್ನು ಕುರಿತ ಹೆಚ್ಚಿನ ಅಧ್ಯಯನ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in