ಹತ್ತು ದಿನಗಳ ಅನುವಾದ ತರಬೇತಿ ಕೋರ್ಸಿಗಾಗಿ ಅರ್ಜಿ

25 Feb 2020 07:36 am

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮಾರ್ಚ 2020 ರಲ್ಲಿ ಹತ್ತು ದಿನಗಳ ಇಂಗ್ಲೀಷ - ಕನ್ನಡ ಅನುವಾದ ತರಬೇತಿ ಕೋರ್ಸನ್ನು ಏರ್ಪಡಿಸಲು ಉದ್ದೇಶಿಸಿದೆ. ತರಬೇತಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಪ್ರತಿದಿನ ಅಪರಾಹ್ನ 3.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನೀಡಲಾಗುತ್ತದೆ. ಆಸಕ್ತರು ಪ್ರಾಧಿಕಾರದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ಅಂಚೆ / ಕೋರಿಯರ್‌ ಅಥವಾ ಭರ್ತಿಮಾಡಿ ಸಹಿಯೊಂದಿಗೆ ಸ್ಕ್ಯಾನ್‌ ಮಾಡಿ PDF ಮಾದರಿಯಲ್ಲಿ ಪ್ರಾಧಿಕಾರದ ಇ-ಮೇಲ್‌ ವಿಳಾಸಕ್ಕೆ ಸಲ್ಲಿಸುವುದು.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 04.03.2020. ಅಪೂರ್ಣ ಅರ್ಜಿ ಹಾಗು ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.


ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in