ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ

16 Jan 2018 01:34 pm

ಸೂಚನೆಗಳು:

  1. ಅರ್ಜಿಯೊಂದಿಗೆ ಯಾವುದೇ ದಾಖಲೆಗಳನ್ನು ಸಲ್ಲಿಸಕೂಡದು.
  2. ಅರ್ಜಿಯೊಂದಿಗೆ ಅನುವಾದಕ್ಕೆ ಆಯ್ದು ಕೊಂಡ ವಿಷಯದ ಅಧ್ಯಯನದ ಶೀರ್ಷಿಕೆ, ವ್ಯಾಪ್ತಿ, ಉದ್ದೇಶ, ಅಧ್ಯಯನ ವಿಧಾನ ಮುಂತಾದ ವಿವರಗಳನ್ನೊಳಗೊಂಡಂತೆ 200 ಶಬ್ದಗಳಲ್ಲಿ ಸಂಕ್ಷಿಪ್ತ ವಿವರ ನೀಡುವುದು.
  3. ಅರ್ಜಿದಾರರ ಗರಿಷ್ಟ ವಯಸ್ಸು 4೦ ವರ್ಷಗಳು.
  4. ಪ್ರಾಧಿಕಾರದಿಂದ ಸಂದರ್ಶನಕ್ಕೆ ಹಾಜರಾಗಲು ಸೂಚಿಸಿದಲ್ಲಿ ಕೆಳಕಂಡ ಮೂಲ ದಾಖಲೆಗಳು ಹಾಗು ಧೃಢೀಕೃತ ನಕಲು ಪ್ರತಿಳೊಂದಿಗೆ ಹಾಜರಾಗತಕ್ಕದ್ದು.
  5. ವಯಸ್ಸಿನ ದೃಡೀಕರಣ ದಾಖಲೆ (SSLC ಪ್ರಮಾಣಪತ್ರ)
  6. ಶೈಕ್ಷಣಿಕ ದಾಖಲೆಗಳು
  7. ಜಾತಿ ಪ್ರಮಾಣಪತ್ರ
  8. ಸಲ್ಲಿಸಲು ಉದ್ದೇಶಿಸಿರುವ ಅಧ್ಯಯನ ವಿಷಯದಲ್ಲಿ ಬೇರೆ ಇಲಾಖೆ/ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿ ಅನುದಾನ ಪಡೆದಿಲ್ಲ ಎಂಬ ಬಗ್ಗೆ ನೋಟರಿ ಪ್ರಮಾಣಪತ್ರ.
  9. ವೃತ್ತಿಯಲ್ಲಿದ್ದರೆ ಅಥವಾ ಶಿಷ್ಯವೇತನ ಪಡೆಯುತ್ತಿದ್ದರೆ ಈ ಫೆಲೋಷಿಪ್ ಪಡೆಯಲು ಯಾವ ಆಕ್ಷೇಪಣೆಯೂ ಇಲ್ಲವೆಂದು ದೃಢೀಕರಿಸುವ ಪತ್ರವನ್ನು ಸಂಸ್ಥೆಯ ಮುಖ್ಯಸ್ಥರು / ಮಾರ್ಗದರ್ಶಕರೊಂದಿಗೆ ಸಲ್ಲಿಸಬೇಕು.
  10. ಅರ್ಜಿಯನ್ನು ಮೇಲ್ಕಂಡ ಪ್ರಾಧಿಕಾರದ ವಿಳಾಸಕ್ಕೆ ಅಥವಾ ಭರ್ತಿಮಾಡಿ ಸಹಿಯೊಂದಿಗೆ ಸ್ಕ್ಯಾನ್ ಮಾಡಿ PDF ಮಾದರಿಯಲ್ಲಿ ಪ್ರಾಧಿಕಾರದ ಇ-ಮೇಲ್ ವಿಳಾಸಕ್ಕೆ ದಿನಾಂಕ:17.02.2018 ರ ಸಂಜೆ 5.00 ಗಂಟೆಯ ಒಳಗಾಗಿ ಸಲ್ಲಿಸುವುದು.ಅಪೂರ್ಣ ಅರ್ಜಿ ಹಾಗು ಕೊನೆಯ ದಿನಾಂಕದ ನಂತರ ಸಲ್ಲಿಕೆಯಾಗುವ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in