ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ

23 Nov 2020 11:52 am

ಭಾಷಾಂತರ ಕೋರ್ಸ ಮೊದಲ ಹಂತದ ಆಯ್ಕೆಗಾಗಿ ಅರ್ಜಿ ಕರೆಯಲಾಗಿತ್ತು. ಗರಿಷ್ಠ ಅಭ್ಯರ್ಥಿಗಳು ೩೦ ಕ್ಕೆ ಸೀಮಿತ ಆದರೆ ೪೦೦ ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ.

ಆದ್ದರಿಂದ ಅರ್ಜಿ ಸ್ವೀಕಾರ ಸದ್ಯಕ್ಕೆ ನಿಲ್ಲಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿ ವಿಳಂಬವಾಗಿ ಪತ್ರಿಕಾ ಪ್ರಕಟಣೆ ಪ್ರಕಟವಾಗಿರುವುದನ್ನು ಗಮನಿಸಲಾಗಿದೆ. ಮೊದಲ ಹಂತದ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗುತ್ತಿದ್ದು, ಮತ್ತೆ ಅರ್ಜಿ ಸ್ವೀಕಾರವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಪತ್ರ ಮುಖೇನ ಹಾಗು ಇ ಮೇಲ್ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

...


ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

30 May 2020 08:02 pm

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಬುಕ್ ಆಗಿರುವ ಪುಸ್ತಕಗಳನ್ನು ಕಳುಹಿಸಲು ಸಾಧ್ಯವಿರುವ ಅನ್ಯ ಸೇವೆಯನ್ನು ಪರೀಶಿಲಿಸಿ ಶೀಘ್ರವಾಗಿ ತಲುಪಿಸಲಾಗುವುದು.

...


ಪುಸ್ತಕಗಳನ್ನು ಕಳುಹಿಸುವಲ್ಲಿ ವಿಳಂಬವಾಗುವ ಸಾಧ್ಯತೆಯಿದ್ದು ಸಹಕರಿಸಲು ಕೋರಿದೆ

06 Apr 2020 08:49 pm

ಕೋವಿಡ್ -19 ವೈರಸ್ ಕೊರೊನ ಹರಡುವಿಕೆಯ ಕಾರಣದಿಂದ ಸರ್ಕಾರದ ಆದೇಶದ ಮೇರೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಏಪ್ರಿಲ್14 ಅಥವಾ ಮುಂದಿನ ಆದೇಶದ ವರೆಗೆ ಕಾರ್ಯನಿರ್ವಹಿಸುವುದಿಲ್ಲ.

ಈ ಹಿನ್ನಲೆಯಲ್ಲಿ ಸದರಿ ಅವಧಿಯಲ್ಲಿ ಆನ್ ಲೈನ್ ಮೂಲಕ ಪುಸ್ತಕ ಖರೀದಿಗೆ ಬುಕ್ ಮಾಡಲಾಗುವ ಪುಸ್ತಕಗಳನ್ನು ಲಾಕ್ ಡೌನ್ ಅವಧಿಯ ನಂತರ ಅಂಚೆ ಇಲಾಖೆಯ ಸೇವೆಯನ್ನು ಆಧರಿಸಿ ತಲುಪಿಸಲಾಗುವುದು ಹಾಗು ಈ ಸಂಬಂಧ ಕಳುಹಿಸುವಲ್ಲಿ ವಿಳಂಬವಾಗುವ ಸಾಧ್ಯತೆಯಿದ್ದು ಸಹಕರಿಸಲು ಕೋರಿದೆ.

...


ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು

16 Mar 2020 08:37 pm

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ 25 ಹೊಸಪುಸ್ತಕಗಳು ಮುದ್ರಣಗೊಂಡಿವೆ. ಈ ಎಲ್ಲ 25
ಪುಸ್ತಕಗಳು ಮಾರಾಟಕ್ಕೆ ಲಭ್ಯವಿದ್ದು, ಶೇಕಡ 15% ರಿಯಾಯಿತಿಯ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ.

ಆನ್‌ ಲೈನ್‌ ಮೂಲಕವೂ ಪುಸ್ತಕಗಳನ್ನು ಖರೀದಿಸಬಹುದಾಗಿದ್ದು www.kuvempubhashabharathi.org ಓದುಗರು
ಇದರ ಸದುಪಯೋಗ ಪಡೆದುಕೊಳ್ಳಲು ಈ ಮೂಲಕ ಕೋರಿದೆ.

 

...


ಅನುವಾದ - ಅನುಸಂಧಾನ ತತ್ವ ಮತ್ತು ಪ್ರಯೋಗ

09 Mar 2020 05:03 pm

...


ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳ ಆಹ್ವಾನ - ಅವಧಿವಿಸ್ತರಿಸಿರುವ ಕುರಿತು

28 Feb 2020 09:37 pm

ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳ ಆಹ್ವಾನ - ಅವಧಿವಿಸ್ತರಿಸಿರುವ ಕುರಿತು

...


ಮಾಧ್ಯಮ ಭಾಷಾಂತರ ಕಮ್ಮಟ

28 Feb 2020 09:31 pm

...


ಹತ್ತು ದಿನಗಳ ಅನುವಾದ ತರಬೇತಿ ಕೋರ್ಸಿಗಾಗಿ ಅರ್ಜಿ

25 Feb 2020 07:36 am

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮಾರ್ಚ 2020 ರಲ್ಲಿ ಹತ್ತು ದಿನಗಳ ಇಂಗ್ಲೀಷ - ಕನ್ನಡ ಅನುವಾದ ತರಬೇತಿ ಕೋರ್ಸನ್ನು ಏರ್ಪಡಿಸಲು ಉದ್ದೇಶಿಸಿದೆ. ತರಬೇತಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಆವರಣದಲ್ಲಿ ಪ್ರತಿದಿನ ಅಪರಾಹ್ನ 3.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ನೀಡಲಾಗುತ್ತದೆ. ಆಸಕ್ತರು ಪ್ರಾಧಿಕಾರದ ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ಅಂಚೆ / ಕೋರಿಯರ್‌ ಅಥವಾ ಭರ್ತಿಮಾಡಿ ಸಹಿಯೊಂದಿಗೆ ಸ್ಕ್ಯಾನ್‌ ಮಾಡಿ PDF ಮಾದರಿಯಲ್ಲಿ ಪ್ರಾಧಿಕಾರದ ಇ-ಮೇಲ್‌...


ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಸುಬ್ರಹ್ಮಣ್ಯ

12 Feb 2020 10:56 pm

...


ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ

12 Feb 2020 10:54 pm

...First « 1 2 3 4 5 6 » Last

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ,
ಮಲ್ಲತ್ತಹಳ್ಳಿ, ಬೆಂಗಳೂರು - 560056
ದೂರವಾಣಿ: 080 - 23183311, 23183312
ವಿದ್ಯನ್ಮಾನ ಅಂಚೆ: kbbp-bengaluru@ka.gov.in