ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ತುಕಾರಾಮರ ಬೋಧನೆಗಳು

- ಡಿ.ಎನ್.ವೀಣಾ -


"ಮಹಾರಾಷ್ಟ್ರವು ಜನ್ಮನೀಡಿದ ಹಲವು ಅತ್ಯುನ್ನತ ಸಂತರಲ್ಲಿ ಒಬ್ಬರಾದ ತುಕಾರಾಮರ ಜೀವನ, ಆಶಯ, ಹೋರಾಟ, ಅವರಲ್ಲಿ ಸಂತತ್ವದ ವಿಕಸನ, ಅವರು ತುಳಿದ ಜ್ಞಾನೋದಯದ ಪಥ, ಅವರ ಧರ್ಮ, ಆಧ್ಯಾತ್ಮಯೋಗ, ಸಾಧನೆ ಮತ್ತು ಚರಿತ್ರೆಯಲ್ಲಿ ಹಾಗೂ ಜನತೆಯ ಜೀವನದಲ್ಲಿ ಅವರ ಪ್ರಭಾವ ಇವುಗಳನ್ನು ಇಲ್ಲಿ ಶ್ರೀ ಎಸ್. ಆರ್. ಶರ್ಮ ಅವರು ವಿವರಿಸಿದ್ದಾರೆ. ಜ್ಞಾನದೇವರು ಕಟ್ಟಲು ಉದ್ಯುಗಿಸಿದ ಭವ್ಯ ಕಟ್ಟಡದ ಕಲಶವಾದರು ತುಕಾರಾಮರು ಎಂಬ ಮಾತು ಇಲ್ಲಿ ಸಾರ್ಥಕವಾಗಿ ಮೂಡಿಬಂದಿದೆ. ಅಸಹನೆಯ ಮೂರ್ತಿಯಾಗಿದ್ದ ತಮ್ಮ ಹೆಂಡತಿ ಹಾಗೂ ಪ್ರತಿಕೂಲವಾಗಿದ್ದ ಪರಿಸ್ಥಿತಿಗಳಲ್ಲಿಯೂ ತುಕಾರಾಮರು ಹೇಗೆ ತಮ್ಮ ಸಾಧನೆಯನ್ನು ಮುಂದುವರಿಸಿದರು ಎಂಬುದನ್ನೂ ಸಂಕ್ಷೇಪವಾಗಿ ಕಾಣಿಸಲಾಗಿದೆ.
"
ಪುಸ್ತಕದ ಕೋಡ್ KBBP 0067
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಿ.ಎನ್.ವೀಣಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2010
ಬೆಲೆ 10/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 7/-
ಪುಟಗಳು 79

ಬಯಕೆ ಪಟ್ಟಿ