ಅನುವಾದಗಳಲ್ಲಿ ಅಡಗಿ ಕೂರುವ ಭಾರತ ಮತ್ತು ಯುರೋಪಿನ ನಂಟು ಕಮ್ಮಟ - ಉಜಿರೆ - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ- ಸಮಗ್ರ-ಬರೆಹಗಳು ಸಂಪುಟ-5

- ವಿವಿಧ ಅನುವಾದಕರು -


ದೀನ್ ದಯಾಳ್ ಉಪಾಧ್ಯಾಯರು ಅಂಕಣಕಾರರಾಗಿ ಬರೆಯುತ್ತಿದ್ದ ದೆಹಲಿಯ ಆರ್ಗನೈಸರ್ ಪತ್ರಿಕೆಯಲ್ಲಿ ಬರಹಗಳ ಸಂಗ್ರಹ ಈ ಸಂಪುಟ. ಇಲ್ಲಿನ ಲೇಖನಗಳಲ್ಲಿ ಕೆಲವು ಅಂದಿನ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ, ಪೂರಕವಾಗಿ ಬರೆದವುಗಳಾದರೂ ಇಂದು ಕೂಡ ಕೆಲವು ಉದ್ದೇಶಗಳಿಗೆ ಉಪಯುಕ್ತವಾಗಿವೆ. ಇನ್ನು ಕೆಲವು, ಆಳವಾದ ಚಿಂತನೆಗಳಿಂದ ಕೂಡಿದ, ಭಾರತ ಸರ್ಕಾರದ ಸ್ವರ್ಣನೀತಿ, ರಾಜಕೀಯ ಪಕ್ಷಗಳಿಗೆ ನೀತಿ ಸಂಹಿತೆ, ಫೋರ್ಡ್ ಸಂಸ್ಥೆ ಮತ್ತು ಗೋಹತ್ಯೆ, ರಾಷ್ಟ್ರೀಯತೆ ಮತ್ತು ಮಾನವ ಏಕತೆ ಹೀಗೆ ನಮ್ಮ ಆಲೋಚನೆಗಳಿಗೆ ಆಹಾರವನ್ನೊದಗಿಸುವ ವಿವಿಧ ಲೇಖನಗಗಳನ್ನೊಳಗೊಂಡಿದ್ದು ಇತಿಹಾಸವನ್ನು ತಿಳಿಯ ಬಯಸುವವರಿಗೆ ಸಹಾಯವನ್ನು ಮಾಡುತ್ತವೆ. ಇಲ್ಲಿನ ಲೇಖನಗಳಿಗೆ ಅಂದಿನ ವರ್ತಮಾನದ ಸಂಕೋಲೆಯಿಲ್ಲ. ಕೆಲವು ವಿಚಾರಗಳಂತೂ ಇಂದಿನ ನಮ್ಮ ವ್ಯವಸ್ಥೆಗೂ ಅನ್ವಯವಾಗುವಂತಹವುಗಳಾಗಿವೆ.
ಪುಸ್ತಕದ ಕೋಡ್ KBBP 0041
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2012
ಬೆಲೆ 125/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 88/-
ಪುಟಗಳು 368

ಬಯಕೆ ಪಟ್ಟಿ