ವಿಚಾರ ಸಾಹಿತ್ಯ

ಲ್ಯಾಟಿನ್ ಕಾನೂನು ಸೂತ್ರಗಳು ಮತ್ತು ಪದಗಳ ನಿಘಂಟು

- ಡಾ.ರಮೇಶ್ -


ಕಾನೂನು ಶಿಕ್ಷಣ ಪಡೆಯುವವರು ಈಗಲೂ ಇಂಗ್ಲಿಷ್ ಮಾಧ್ಯಮದ ಮೂಲಕ ವೇಕಲಿಕೆಯನ್ನು ಪೂರೈಸಬೇಕಾಗಿದೆ. ಹೀಗೆಕಲಿಯುತ್ತಿರುವವರು ಕೇಳುವ ಮತ್ತು ಬಳಸುವ ಇಂಗ್ಲಿಷ್ ನುಡಿ ಸಾಮಾನ್ಯ ಬಳಕೆಯಲ್ಲಿರುವಂತದ್ದಲ್ಲ. ಲ್ಯಾಟಿನ್ ಕಾನೂನು ಸೂತ್ರಗಳನ್ನು ಮತ್ತು ಪದಗಳನ್ನು ಅವು ಇರುವಂತೆಯೇ ಇಂಗ್ಲಿಷ್ ಭಾಷೆಯು ತನ್ನ ಕಾನೂನಿನ ಪರಿಭಾಷೆಯಲ್ಲಿ ಉಳಿಸಿಕೊಂಡಿದೆ. ಇಂತಹ ಸೂತ್ರಗಳ ಮತ್ತು ಪದಗಳ ಅರ್ಥವನ್ನು ತಿಳಿಹೇಳುವಕೋಶಗಳು ಅಗತ್ಯವಾಗಿದ್ದು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹೊರತಂದಿರುವ ಈ ಕೋಶವು ಆ ಕೊರತೆಯನ್ನು ತುಂಬಬಹುದು.
ಈ ನಿಘಂಟಿನಲ್ಲಿ ಸರಿ ಸುಮಾರು ಮೂರು ಸಾವಿರಕ್ಕಿಂತಲೂ ಹೆಚ್ಚಿನ ಲ್ಯಾಟಿನ್ ಕಾನೂನುಸೂತ್ರಗಳು ಮತ್ತು ಪದಗಳು ಉಲ್ಲೇಖವಾಗಿವೆ. ಲ್ಯಾ ಲ್ಯಾಟಿನ್ ಕಾನೂನುಸೂತ್ರಗಳು ಮತ್ತು ಪದಗಳನ್ನುಇಂಗ್ಲಿಷ್ ಭಾಷೆಗೆಮತ್ತು ಇಂಗ್ಲಿಷಿನಿಂದ ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಈ ನಿಘಂಟಿನಲ್ಲಿ ಬಳಸಿರುವ ಕಾನೂನು ಸೂತ್ರಗಳು ಮತ್ತು ಪದಗಳು ಬಹುಮಟ್ಟಿಗೆ ಎಲ್ಲಾ ಕಾನೂನು ವಿಷಯಗಳನ್ನು ಒಳಗೊಂಡಿದ್ದು, ಕಾನೂನು ಪದವಿ, ಸ್ನಾತಕೋತ್ತರಪದವಿ, ಪಿಎಚ್.ಡಿ.ಪದವಿ ವಿದ್ಯಾರ್ಥಿಗಳಿಗೆ, ಕನ್ನಡಮಾದ್ಯಮದಲ್ಲಿ ಅಭ್ಯಾಸಮಾಡುತ್ತಿರುವ ಕಾನೂನು ವಿದ್ಯಾರ್ಥಿಗಳಿಗೆ, ಉಪನ್ಯಾಸಕರು, ನ್ಯಾಯಾಧೀಶರುಗಳಿಗೆ ಈ ನಿಘಂಟು ಹೆಚ್ಚು ಉಪಯುಕ್ತವಾಗಿದೆ.
ಪುಸ್ತಕದ ಕೋಡ್ KBBP 0300
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಾ.ರಮೇಶ್
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 150/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 128/-
ಪುಟಗಳು 278

ಬಯಕೆ ಪಟ್ಟಿ