ವಿಚಾರ ಸಾಹಿತ್ಯ

ಮಹಿಳಾ ಅಧ್ಯಯನ ಪರಿಭಾಷೆ

- ಡಾ.ಟಿ.ಆರ್.ಚಂದ್ರಶೇಖರ್ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಮುಖ ಪರಿಕಲ್ಪನೆಗಳು ಮಾಲೆಯಡಿ ಮುಖ್ಯ ವೈಚಾರಿಕ ಕಲ್ಪನೆಗಳನ್ನು ಪರಿಚಯ ಮಾಡಿಕೊಡುವ ಕೃತಿಗಳನ್ನು ಪ್ರಕಟಿಸುತ್ತಿದ್ದು, ಮಹಿಳಾ ಅಧ್ಯಯನ ಪರಿಭಾಷೆಯು ಈ ಮಾಲೆಯ ಒಂದು ಪ್ರಕಟಣೆಯಾಗಿದೆ. ಮಹಿಳಾ ಅಧ್ಯಯನವು ಪ್ರವರ್ಧಮಾನಕ್ಕೆ ಬಂದ ಹಾಗೆ ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಚರಿತ್ರೆ ಹೀಗೆ ಎಲ್ಲ ಜ್ಞಾನಶಿಸ್ತುಗಳನ್ನು ಸ್ತ್ರೀವಾದಿ ನೆಲೆಯಿಂದ ನೋಡುವ ಪ್ರಯತ್ನ ನಡೆಯುತ್ತಿವೆ ಹಾಗೂ ಈ ಶಿಸ್ತುಗಳೆಲ್ಲವೂ ಭಿನ್ನವಾಗಿ ಕಾಣಲಾರಂಭಿಸಿವೆ. ಈ ಎಲ್ಲ ಪ್ರಯತ್ನ ಮತ್ತು ಪ್ರಯೋಗಗಳ ಪರಿಣಾಮವಾಗಿ ಇಂದು ಸ್ತ್ರೀವಾದಿ ಪರಿಭಾಷೆಯೊಂದು ರೂಪುಗೊಂಡಿದೆ. ಲಿಂಗ ಸಂಬಂಧಿ ಪರಿಭಾಷೆಯ ತಾತ್ವಿಕ ಚೌಕಟ್ಟನ್ನು ಅರಿಯುವುದು, ಪರಿಕಲ್ಪನೆಗಳಿಗೆ ಬರಿಯ ಅರ್ಥ ನೀಡುವುದರ ಬದಲು ಮೂಲದಲ್ಲಿನ ಸಿದ್ಧಾಂತ, ಕಾಲಾನುಕ್ರಮದಲ್ಲಿ ಉಂಟಾಗುತ್ತಿರುವ ಅದರ ಅರ್ಥದಲ್ಲಿನ ಬದಲಾವಣೆಯ ನೆಲೆಗಳು, ಅದರ ಪ್ರಸ್ತುತ ಪಡೆದುಕೊಂಡಿರುವ ಅರ್ಥ ಮುಂತಾದ ಸಂಗತಿಗಳನ್ನು ಕುರಿತು ಚರ್ಚಿಸಿದ್ದು ಓದುಗರಿಗೆ ಉಪಯುಕ್ತ ಕೃತಿಯಾಗಿದೆ.
ಪುಸ್ತಕದ ಕೋಡ್ KBBP 0281
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಾ.ಟಿ.ಆರ್.ಚಂದ್ರಶೇಖರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 75/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 60/-
ಪುಟಗಳು 148

ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪುಸ್ತಕವನ್ನು ಬುಕ್ ಮಾಡಿದಲ್ಲಿ, ಪುಸ್ತಕಗಳು ತಲುಪಲು ಕನಿಷ್ಟ 07 ರಿಂದ 10 ದಿವಸಗಳ ಕಾಲಾವಧಿ ಬೇಕಾಗಬಹುದು ಎಂಬ ವಿಷಯವನ್ನು ದಯಮಾಡಿ ಗಮನಿಸುವುದು.

ಬಯಕೆ ಪಟ್ಟಿ