ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಕನ್ನಡ ಮರಾಠಿ ನಂಟು: ಮುನ್ನೋಟ

- ಡಾ.ಕೆ.ವಿ.ನಾರಾಯಣ -


ಕನ್ನಡ ಮತ್ತು ಮರಾಠಿ ನುಡಿ ಸಂಸ್ಕೃತಿಗಳ ನಡುವಣ ನಂಟು ಹಲವು ಶತಮಾನಗಳಷ್ಟು ದೀರ್ಘವಾದುದು. ಈ ಎರಡೂ ನುಡಿಗಳ ಹುಟ್ಟು ಬೆಳವಣಿಗೆಗಳ ನಡುವೆಯೂ ಕೆಲವು ಹಂಚಿಕೊಂಡ ಎಳೆಗಳಿವೆ. ಈ ನುಡಿಗಳನ್ನಾಡುವ ರಾಜ್ಯಗಳ ನಡುವೆ ರಾಜಕೀಯ ಕಾರಣಗಳಿಂದ ಎಳೆದ ಗಡಿಗೆರೆಗಳಿವೆಯಾದರೂ ಜನರ ಬದುಕಿನ ಹರವು ಒಡಕಿಲ್ಲದೆ ಹರಡಿಕೊಂಡಿದೆ. ಎರಡು ನುಡಿಗಳ ಬರಹಗಳು ಒಂದರಿಂದ ಇನ್ನೊಂದಕ್ಕೆ ಚಲಿಸುವ ಬಗೆಯೂ ಹಿಂದಿನಿಂದ ನಡೆದುಬಂದಿದೆ. ಹೊಸ ಕಾಲದಲ್ಲಿಯೂ ಮುಂದುವರಿಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರುವ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನ ರೂಪದ ಈ ಪುಸ್ತಕವು ಕನ್ನಡ-ಮರಾಠಿ ಅನುವಾದದ ಹೊಸ ಸಾಧ್ಯತೆಗಳು ಮರಾಠಿ-ಕನ್ನಡ ರಂಗಭೂಮಿ. ಕನ್ನಡಕ್ಕೆ ಅನುವಾದಗೊಂಡಿರುವ ಮರಾಠಿ ಕಥನ ಸಾಹಿತ್ಯ. ಮರಾಠಿಯಲ್ಲಿ ಕನ್ನಡ, ಕನ್ನಡ ಮರಾಠಿ ಅನುವಾದ ಪ್ರಕ್ರಿಯೆ; ಹೊಸ ದಿಕ್ಕುಗಳ ಸಾಧ್ಯತೆ ಎಂಬ ಲೇಖನಗಳನ್ನು ಒಳಗೊಂಡಿದೆ.
ಪುಸ್ತಕದ ಕೋಡ್ KBBP 0280
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಾ.ಕೆ.ವಿ.ನಾರಾಯಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 40/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 32/-
ಪುಟಗಳು 87

ಬಯಕೆ ಪಟ್ಟಿ