ತಿಂಗಳ ಕಾರ್ಯಕ್ರಮ - ಉಪನ್ಯಾಸಕರು ; ಡಾ.ನಟರಾಜ್ ಹುಳಿಯಾರ್ - ಹೆಚ್ಚಿನ ಮಾಹಿತಿಗೆ | 2018-19ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳು ಮತ್ತು 2017ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು - ಹೆಚ್ಚಿನ ಮಾಹಿತಿಗೆ |

ಸಾಹಿತ್ಯ ಮಾಲೆ

ಅಭಿವೃದ್ಧಿ

- ಡಾ.ಎಂ.ಚಂದ್ರ ಪೂಜಾರಿ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಮುಖ ಪರಿಕಲ್ಪನೆಗಳು ಮಾಲೆಯಡಿ ಮುಖ್ಯ ವೈಚಾರಿಕ ಕಲ್ಪನೆಗಳನ್ನು ಪರಿಚಯ ಮಾಡಿಕೊಡುವ ಕೃತಿಗಳನ್ನು ಪ್ರಕಟಿಸುತ್ತಿದ್ದು, ಅಭಿವೃದ್ಧಿಯು ಈ ಮಾಲೆಯ ಒಂದು ಪ್ರಕಟಣೆಯಾಗಿದೆ. ಅಭಿವೃದ್ಧಿ ಪದಕ್ಕೆ ಎರಡು ಅರ್ಥಗಳಿವೆ. 1) ಜೀವಿಗಳ ಅಭಿವೃದ್ಧಿ, 2) ಸಾಮಾಜಿಕ ಅಭಿವೃದ್ಧಿ. ಅಭಿವೃದ್ಧಿ ಎಂಬುದು ಇಂದು ಕೇವಲ ಪರಿಕಲ್ಪನೆ ಮಾತ್ರವಾಗಿ ಉಳಿದಿಲ್ಲ. ಹಲವರಿಗೆ ಬಿಡುಗಡೆ ನೀಡಿರುವ ಅದಕ್ಕಿಂತ ಮಿಗಿಲಾಗಿ ಅನೇಕರನ್ನು ಕಂಗಾಲು ಮಾಡಿರುವ ವಾಸ್ತವವೂ ಹೌದು. ಈ ಹೊತ್ತಗೆಯ ಅಧ್ಯಾಯಗಳು ಅಭಿವೃದ್ಧಿಯು ತಾತ್ವಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಮುಖಗಳನ್ನು ಪರಿಚಯಿಸುತ್ತದೆ. ಅಭಿವೃದ್ಧಿ & ಅಸಮಾನತೆ, ಅಸಮಾನತೆಯ ಕಾರಣದಿಂದ ಹೆಚ್ಚುತ್ತಿರುವ ಅನಭಿವೃದ್ಧಿ, ಸಮಾನತೆಯು ಸಬಲೀಕರಣಕ್ಕೆ ದಾರಿ ಮಾಡಿಕೊಡುವ ಪರಿ ಈ ಎಲ್ಲ ಅಂಶಗಳನ್ನು ಒಳಗೊಂಡಿವೆ.
ಪುಸ್ತಕದ ಕೋಡ್ KBBP 0279
ಪ್ರಕಾರಗಳು ಸಾಹಿತ್ಯ ಮಾಲೆ
ಲೇಖಕರು ಡಾ.ಎಂ.ಚಂದ್ರ ಪೂಜಾರಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 75/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 38/-
ಪುಟಗಳು 108

ಬಯಕೆ ಪಟ್ಟಿ