ರಾಷ್ಟ್ರೀಯ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಭಾಷಾಂತರ ಅಧ್ಯಯನದಲ್ಲಿ ಸಾಂಸ್ಕೃತಿಕ ತಿರುವು - ಹೆಚ್ಚಿನ ಮಾಹಿತಿಗೆ | ತೆಲುಗು ಕತೆಗಳ ಕನ್ನಡ ಅನುವಾದ ಕಮ್ಮಟ - ಹೆಚ್ಚಿನ ಮಾಹಿತಿಗೆ | ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ವಿಚಾರ ಸಂಕಥನ-1

- ಓ.ಎಲ್.ನಾಗಭೂಷಣಸ್ವಾಮಿ, ಶ್ರೀಧರ್ ಬಳಗಾರ್ -


ಈ ಕೃತಿಯು ಪೀಟರ್ ವ್ಯಾಟ್ಸನ್ ಬರೆದಿರುವ `ಐಡಿಯಾಸ್’ ಕೃತಿಯನ್ನು ಆಧರಿಸಿದ ಸಂಗ್ರಹರೂಪ. ಈ ಕೃತಿಯು ಚರಿತ್ರೆ, ಸಮಾಜಶಾಸ್ತ್ರ, ಮನಶ್ಶಾಸ್ತ್ರ ಇಂಥ ಯಾವುದೇ ಒಂದು ನಿರ್ದಿಷ್ಟ ವಿಷಯ ಕುರಿತದ್ದಲ್ಲ. ಸಂಶೋಧನಾ ಕೃತಿಯೂ ಅಲ್ಲ. ಬದಲಾಗಿ ವಿವಿಧ ವಿದ್ವಾನ್ ಕ್ಷೇತ್ರಗಳಲ್ಲಿ ನಡೆದಿರುವ ಸಂಶೋಧನೆ, ಚರ್ಚೆಗಳನ್ನು ಆಧಾರವಾಗಿಟ್ಟುಕೊಂಡು ಆಧುನಿಕ ಮನುಷ್ಯನನ್ನು ತಿದ್ದಿ ರೂಪಿಸುವ ಆಧುನಿಕ ಮನುಷ್ಯನ ಮನಸ್ಸು ಭಾವನೆ, ಕ್ರಿಯೆ ವಿಚಾರಗಳನ್ನು ಪ್ರಭಾವಿಸಿರುವ ಸಂಗತಿಗಳನ್ನು ಕುರಿತದ್ದು. ಪಾಶ್ಚಾತ್ಯ ದೇಶಗಳಲ್ಲಿ ಆದ ಬೆಳವಣಿಗೆ ಏಶಿಯಾದ ದೇಶಗಳಲ್ಲಿ ಯಾಕೆ ಸಾಧ್ಯವಾಗಲಿಲ್ಲ, ಯಾವ ವಿಚಾರಗಳು ಸಾಮಾಜಿಕ, ರಾಜಕೀಯ, ಧಾರ್ಮಿಕ ಸಂಗತಿಗಳು ಜಗತ್ತಿನ ಪಲ್ಲಟಗಳಿಗೆ ಕಾರಣವಾಗಿದೆ ಎನ್ನುವುದರ ಚಿತ್ರಣ ಭಾರತ, ಚೀನಾ ಮತ್ತು ಮಧ್ಯಪ್ರಾಚ್ಯದ ಮುಸ್ಲಿಂ ರಾಷ್ಟ್ರಗಳು ಯುರೋಪಿಗಿಂತ ಹಲವು ಸಂಗತಿಗಳಲ್ಲಿ ಮುಂದಿದ್ದರೂ ಏಕೆ ಹಿಂದೆ ಬಿದ್ದವು ಎನ್ನುವ ಪರಿಶೀಲನೆಯನ್ನು ಭಾಷೆಯ ಉಗಮಕ್ಕಿಂತ ಮುಂಚಿನ ವಿಚಾರಗಳು, ಭಾಷೆಯ ಉಗಮ, ವಿಜ್ಞಾನ, ತತ್ವಶಾಸ್ತ್ರ ಮತ್ತು ಮಾನವಿಕಗಳ ಉಗಮ, ಇಸ್ರೇಲ್ ಮತ್ತು ಜೀಸಲ್ ಎಂಬ ಪರಿಕಲ್ಪನೆಗಳು ಸಂಸ್ಕೃತ, ವೇದಾಂತ ಹಿಂದೂ ಅಂಕಿಗಳು, ಚರ್ಚಿನ ವಿಚಾರ ನಿಯಂತ್ರಣಗಳು, ಪುನರುಜ್ಜೀವನ ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಿರುವ ಈ ಸಂಪುಟಗಳು ಕನ್ನಡ ಓದುಗರಿಗೆ ದೊರಕಿರುವುದು ಒಂದು ಸುಕೃತ ಯೋಗವೇ ಸರಿ.
ಪುಸ್ತಕದ ಕೋಡ್ KBBP 0277
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಓ.ಎಲ್.ನಾಗಭೂಷಣಸ್ವಾಮಿ, ಶ್ರೀಧರ್ ಬಳಗಾರ್
ಭಾಷೆ ಕನ್ನಡ
Published 2016
ಬೆಲೆ 200/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 170/-
ಪುಟಗಳು 368

ಬಯಕೆ ಪಟ್ಟಿ