ಜೀವನ ಚರಿತ್ರೆ

ಫೀಲ್ಟ್ ಮಾರ್ಷಲ್ ಕಾರ್ಯಪ್ಪ

- ಪ್ರಧಾನ್ ಗುರುದತ್ತ -


ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರು ಯಶಸ್ಸಿನ ವೃತ್ತಿ ಜೀವನದಲ್ಲಿ ಅನೇಕ ಪ್ರಥಮಗಳನ್ನು ಸಾಧಿಸಿದವರು. ಇಂದೂರಿನ ಡ್ಯಾಲಿ ಕಾಲೇಜಿನ ಭಾರತೀಯ ಸೈನಿಕ ಶಾಲೆಯ ವಿದ್ಯಾರ್ಥಿಗಳ ಪ್ರಥಮ ತಂಡಕ್ಕೆ ಬಂದು ಸೇರಿಕೊಂಡ ಹಾಗೂ ಅಲ್ಲಿಂದ ಸೇನಾ ಪದವಿಯನ್ನು ಪಡೆದುಕೊಂಡ ಮೊಟ್ಟಮೊದಲ ಕೊಡವ, ಕ್ವೆಟ್ಟಾದಲ್ಲಿನ ಸಿಬ್ಬಂದಿ ಕಾಲೇಜನ್ನು ಪ್ರವೇಶಿಸಿದ ಪೊಟ್ಟಮೊದಲ ಭಾರತೀಯ ಅಧಿಕಾರಿ, ಮೊಟ್ಟಮೊದಲ ಭಾರತೀಯ ಬ್ರಿಗೇಡಿಯರ್, ಮೊಟ್ಟಮೊದಲ ಭಾರತೀಯ ಮೇಜರ್ ಜನರಲ್, ಮೊಟ್ಟಮೊದಲ ಸರ್ವೋಚ್ಚ ಸೇನಾಧಿಪತಿಯೂ ಆಗಿದ್ದ ಕೆ.ಎಂ. ಕಾರ್ಯಪ್ಪ ಅವರು ಯೋಧರ ಬಗೆಗೆ ಅಪಾರವಾದ ಪ್ರೀತಿ ಇತ್ತು. ಅವರ ದೇಶ ಪ್ರೇಮ ಒಂದು ಐತಿಹ್ಯವೇ ಆಗಿ ಪರಿಣಮಿಸಿದೆ. ಇವರ ಸಾಧನೆಗೆ ಭಾರತ ಸರ್ಕಾರ ಫೀಲ್ಡ್ ಮಾರ್ಷಲ್ ಪದವಿಯನ್ನು ನೀಡಿ ಗೌರವಿಸಿದೆ. ಇಂತಹ ಶಿಸ್ತಿನ ಸಿಪಾಯಿಯ ಖಾಸಗಿ ಮತ್ತು ಸರ್ಕಾರಿ ಪತ್ರಾಗಾರಗಳಿಂದ ಸಂಗ್ರಹಿಸಿರುವ ಮಾಹಿತಿಯನ್ನು ಒಳಗೊಂಡಿರುವ ಈ ಕೃತಿಯು ಅವರ ಜೀವನ ವಿವರಗಳನ್ನು ಕಟ್ಟಿಕೊಡುವ ಒಂದು ಉತ್ತಮ ಕೃತಿಯಾಗಿದೆ.
ಪುಸ್ತಕದ ಕೋಡ್ KBBP 0271
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಪ್ರಧಾನ್ ಗುರುದತ್ತ
ಭಾಷೆ ಕನ್ನಡ
ಪ್ರಕಟಿತ ವರ್ಷ 2017
ಬೆಲೆ 500/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 425/-
ಪುಟಗಳು 204

ಬಯಕೆ ಪಟ್ಟಿ