ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಅಭಯ

- ಲಕ್ಷ್ಮಣಾಚಾರ್ ಎಂ.ಎಸ್ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ತನ್ನ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಎಂ.ಎಸ್.ಲಕ್ಷ್ಮಣಾಚಾರ್ ಅವರು ಕನ್ನಡಕ್ಕೆ ಅನುವಾದಿಸಿರುವ ಅಭಯ ಕೃತಿಯನ್ನು ಪ್ರಕಟಿಸಿದೆ.
ಈ ಕಾದಂಬರಿಯ ಕಥಾನಾಯಕಿ ಸೇತುಲಕ್ಷ್ಮಿ ಒಂದು ಕುಗ್ರಾಮದ ಪ್ರತಿಷ್ಠಿತ ಮನೆತನದಲ್ಲಿ ಜನಿಸಿದವಳು. ಶಾಲಾ ವಿದ್ಯಾಭ್ಯಾಸ ಮುಗಿದ ನಂತರ ದೂರದ ನಗರದಲ್ಲಿ ತಂದೆಯ ಮಿತ್ರ ಭಾಸ್ಕರ ಮೆನೊನ್ರವರ ಮನೆಯಲ್ಲಿದ್ದುಕೊಂಡು ಕಾಲೇಜು ಶಿಕ್ಷಣ ಮುಂದುವರೆಸುವಳು. ಜೊತೆಗೆ ಬರಹಗಾರ್ತಿಯೆನಿಸಿಕೊಳ್ಳುತ್ತಾಳೆ. ಕೊನೆಗೆ ಮೆನೂನ್ರವರ ಪುತ್ರ ಮುರಳಿಗೆ ಸೇತುಲಕ್ಷ್ಮಿಯನ್ನು ತಂದುಕೊಳ್ಳಲು ಅವರು ಯೋಚಿಸುತ್ತಿರುವಾಗ ಅದನ್ನು ನಿರಾಕರಿಸುತ್ತಾಳೆ. ನಂತರ ಕಾಲೇಜು ಅಧ್ಯಾಪಕಿಯಾದಾಗ ಅಲ್ಲಿನ ಪ್ರೊಫೆಸರ್ ಅವಳಿಂದ ಆಕರ್ಷಿತನಾಗಿ ವಿವಾಹವಾಗಲು ನಿರ್ಧರಿಸುತ್ತಾರೆ. ಅಷ್ಟರಲ್ಲಿ ಸೇತುಲಕ್ಷ್ಮಿಯ ಅಣ್ಣಂದಿರು ಬೇರೆ ಬೇರೆಯಾಗಿ ಮನೆಯ ವಾತಾವರಣ ಗಂಭೀರವಾಗುತ್ತದೆ. ವಿಧಿಯ ಕೈವಾಡ ಸೇತುಲಕ್ಷ್ಮಿ ಸ್ತನ ಕ್ಯಾನ್ಸರಿಗೆ ತುತ್ತಾಗುತ್ತಾಳೆ. ಪ್ರೊಫೆಸರ್ ಬಾಲಕೃಷ್ಣ ಅವಳನ್ನು ಸ್ವೀಕರಿಸಲು ಸಿದ್ಧನಾಗುತ್ತಾನಾದರೂ ಸೇತುಲಕ್ಷ್ಮಿ ತನ್ನ ಸ್ಥಿತಿಗೆ ರೋಸಿ ನಿಸ್ಸಹಾಯಕಳಂತೆ ತನ್ನ ಬಾಳನ್ನೇ ಕೊನೆಗಾಣಿಸುತ್ತಾಳೆ. ಲೇಖಕರೇ ಹೇಳುವಂತೆ ಬಾಳಿನೊಂದಿಗೆ ತೀವ್ರವಾದ ಸ್ನೇಹ, ಉತ್ಕಟ ಆಸಕ್ತಿಯನ್ನು ತಾಳಿರುವಾಗ ವಿಧಿಯ ಆಘಾತಕ್ಕೆ ಶರಣಾಗಿ ಮರಣದಲ್ಲೇ ಅಭಯವನ್ನು ಪಡೆಯುವ ಒಬ್ಬ ಅಸಹಾಯ ಹೆಣ್ಣಿನ ಚರಮಗೀತೆಯಾಗಿದೆ ಈ ಕಾದಂಬರಿ.
ಪುಸ್ತಕದ ಕೋಡ್ KBBP 0269
ಪ್ರಕಾರಗಳು ಕಾದಂಬರಿ
ಲೇಖಕರು ಲಕ್ಷ್ಮಣಾಚಾರ್ ಎಂ.ಎಸ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 120/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 96/-
ಪುಟಗಳು 264

ಬಯಕೆ ಪಟ್ಟಿ