ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಕುವೆಂಪು ಬರೆಹಗಳ ಓದಿನ ರಾಜಕಾರಣ

- ಆರ್.ಚಲಪತಿ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಕುವೆಂಪು ಬರೆಹಗಳನ್ನು ಕುರಿತು ಅಧ್ಯಯನ ಮಾಡಲು, ಅವರ ಕೃತಿಗಳನ್ನು ಇತರ ಭಾರತೀಯ ಭಾಷೆಗಳಿಗೆ ಅನುವಾದ ಮಾಡಲು ನೆರವಾಗುವ ಫೆಲೋಶಿಪ್ ಗಳನ್ನು ನೀಡುತ್ತಿದ್ದು, ಇದರಲ್ಲಿ ಫೆಲೋಶಿಪ್ ಪಡೆದಿರುವ ಡಾ. ಆರ್ ಚಲಪತಿಯವರು ಮಂಡಿಸಿದ ಕುವೆಂಪು ಬರಹಗಳ ಓದಿನ ರಾಜಕಾರಣ ಪ್ರಬಂಧವನ್ನು ಪ್ರಕಟಿಸಿದೆ. ಓದು ಯಾವುದೇ ಬಗೆಯದಿರಲಿ ಅದಕ್ಕೊಂದು ಗುರಿಯಿರುತ್ತದೆ. ಪ್ರತಿಯೊಂದು ಓದಿನ ಗುರಿಯಲ್ಲಿಯೂ ಒಂದು ಬಗೆಯ ಪಾಲಿಟಿಕ್ಸ್ – ರಾಜಕಾರಣ-ಕೆಲಸ ಮಾಡುತ್ತದೆ. ಈ ರಾಜಕಾರಣವನ್ನು ನೇರ ಮತ್ತು ನಿಖರವಾದ ಗ್ರಹಿಕೆಯಲ್ಲಿಟ್ಟುಕೊಂಡು ಓದದಿದ್ದರೂ ಸಾಮಾಜಿಕ ಬದುಕಿನ ತಿಳಿವುಗಳ ಏರು- ಪೇರು, ಏಣಿ-ಶ್ರೇಣಿಯ ಕೇಳ್ವಿಗಳು ಒಂದು ಓದಿನ ಹಿಂದೆ- ಮುಂದೆ- ಒಳಗೆಲ್ಲಾ ಹರಡಿಕೊಂಡುಬಿಟ್ಟಿರುತ್ತದೆ. ತಮ್ಮನ್ನೇ ಮೇಲು ನೆಲೆಯಲ್ಲಿ ಉಳಿಸಿ-ಬೆಳೆಸಿಕೊಳ್ಳಬೇಕೆನ್ನುವ ಯಜಮಾನಿಕೆಗಳು, ಅನ್ನು ಯಾಕೆಂದು ಕೇಳಿ ಇರುವ ಸಾಮಾಜಿಕ ಅವಕಾಶವನ್ನು ತಮ್ಮದನ್ನಾಗಿಯೂ ಮಾಡಿಕೊಳ್ಳಲು ಪ್ರಯತ್ನಿಸುವ ವಂಚಿತ ನೆಲೆಗಳು ಹೀಗೆ ಕುವೆಂಪು ಬರಹಗಳ ಓದಿನ ರಾಜಕಾರಣದ ವಿವಿಧ ನೆಲೆಯ ಒಳನೋಟಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0264
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಆರ್.ಚಲಪತಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 278

ಬಯಕೆ ಪಟ್ಟಿ