ಕಥೆಗಳು

ಅನ್ನಾ ಕರೆನಿನ

- ಜ.ನಾ ತೇಜಶ್ರೀ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಕನ್ನಡದ ಹೊಸ ತಲೆಮಾರಿನ ಓದುಗರಿಗೆ ಲೋಕ ಸಾಹಿತ್ಯದ ಬಹುಮುಖ್ಯ ಕೃತಿಗಳ ಮರುನಿರೂಪಣೆಗಳನ್ನು ಒದಗಿಸುವ ಒಂದು ಉತ್ತಮ ಯೋಜನೆಯನ್ನು ಕೈಗೊಂಡಿದ್ದು ಇದರಲ್ಲಿ ತೇಜಶ್ರೀಯವರು ಕನ್ನಡಕ್ಕೆ ಅನುವಾದಿಸಿರುವ ರಷ್ಯಾದ ಪ್ರಖ್ಯಾತ ಕಾದಂಬರಿಕಾರ ಟಾಲ್ ಸ್ಟಾಯ್ ಅವರ ಅನ್ನಾ ಕರೆನಿನ ಕಾದಂಬರಿಯ ಪ್ರಕಟಣೆಯೂ ಒಂದಾಗಿದೆ. ಸೇಂಟ್ ಪೀಟರ್ ಬರ್ಗ್ಸ್ನ ಕುಲೀನ ಮನೆತನಕ್ಕೆ ಸೇರಿದ ಅನ್ನಾ ಕರೆನಿನಳ ಬದುಕಿನ ಸೌಂದರ್ಯ, ಘನತೆ ಹಾಗೂ ಬಿಕ್ಕಟ್ಟುಗಳನ್ನು ಹಾಗೆಯೇಅನವ ವರ್ತನೆಯ ಸೂಕ್ಷ್ಮಗಳು, ಮಾನವ ಬದುಕಿನ ಅರ್ಥಪೂರ್ಣತೆ, ವಿಪರ್ಯಾಸ, ದುರಂತ, ರಷ್ಯಾದ ರೈತವರ್ಗ, ಸಿರಿವಂತ ವರ್ಗ, ಆಧ್ಯಾತ್ಮ, ಶಿಕ್ಷಣ, ಸುಧಾರಣೆ, ಮಹಿಳಾ ಹಕ್ಕುಗಳು, ಕುಟುಂಬ, ಮದುವೆ ಮುಂತಾದ ಅಂಶಗಳನ್ನು ಕಾಣಬಹುದು. ಅನ್ನಾಳ ಬದುಕಿನ ದುರಂತ ವೈಯಕ್ತಿಕ ದುರಂತವಾಗಿ ಮಾತ್ರ ಕಾಣದೆ ಒಟ್ಟಾರೆ ನಾಗರಿಕತೆಯ ದುರಂತವಾಗಿ ಬೆಳೆಯುವ ರೀತಿಯನ್ನು ಇಲ್ಲಿ ಗಮನಿಸಬಹುದು.
ಪುಸ್ತಕದ ಕೋಡ್ KBBP 0263
ಪ್ರಕಾರಗಳು ಕಥೆಗಳು
ಲೇಖಕರು ಜ.ನಾ ತೇಜಶ್ರೀ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 100/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 50/-
ಪುಟಗಳು 248

ಬಯಕೆ ಪಟ್ಟಿ