ಕಥೆಗಳು

ಟ್ರೋಜನ್ ಯುದ್ಧ

- ಸೀತಾರಾಮಯ್ಯ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು ಕನ್ನಡದ ಹೊಸ ತಲೆಮಾರಿನ ಓದುಗರಿಗೆ ಲೋಕಸಾಹಿತ್ಯದ ಬಹುಮುಖ್ಯ ಕೃತಿಗಳ ಮರುನಿರೂಪಣೆಯನ್ನು ಒದಗಿಸುವ ಬಹುಮುಖ್ಯ ಯೋಜನೆಯನ್ನು ಕೈಗೊಂಡಿದ್ದು ಇದರಲ್ಲಿ ಕೆ.ಎಂ. ಸೀತಾರಾಮಯ್ಯ ಅವರು ಕನ್ನಡಕ್ಕೆ ಅನುವಾದಿಸಿರುವ ಗ್ರೀಸ್ ನ ಪ್ರಖ್ಯಾತ ಕವಿ ಹೋಮರನ ಇಲಿಯಡ್ ಮಹಾಕಾವ್ಯದ ಸಂಕ್ಷಿಪ್ತ ಕಥನ ಟ್ರೋಜನ್ ಯುದ್ಧ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯಲ್ಲಿ ಗ್ರೀಕರು ಟ್ರೋಜನರ ಮೇಲೆ ದಂಡೆತ್ತಿ ಬಂದುದು ಗ್ರೀಕ್ ಪಕ್ಷದ ಅಪ್ರತಿಮ ವೀರ ಅಕಲೀಸನ ಆಗ್ರಹದಿಂದ ತೊಡಗಿ, ಟ್ರೋಜನ್ ಪಕ್ಷದ ಸೇನಾಪತಿ ಹೆಕ್ಟರನ ಸಾವು, ಮತ್ತು ಶವ ಸಂಸ್ಕಾರ ಮುಂತಾದ ವಿಚಾರಗಳನ್ನೊಳಗೊಂಡ ಹೋಮರ್ ಕವಿಯ ಇಲಿಯಡ್ ಕೃತಿಯ ಮಾಹಿತಿಯನ್ನು ಕರಿಯನ್ನು ಕನ್ನಡಿಯೊಳಗೆ ತೋರಿಸಿದಂತೆ ಅಡಕರೂಪದಲ್ಲಿ ಕೆ.ಎಂ. ಸೀತಾರಾಮಯ್ಯ ಅವರು ಓದುಗರಿಗೆ ಅನುಕೂಲವಾಗುವಂತೆ ಮರುರೂಪಿಸಿದ್ದಾರೆ.
ಪುಸ್ತಕದ ಕೋಡ್ KBBP 0256
ಪ್ರಕಾರಗಳು ಕಥೆಗಳು
ಲೇಖಕರು ಸೀತಾರಾಮಯ್ಯ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 60/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 30/-
ಪುಟಗಳು 100

ಬಯಕೆ ಪಟ್ಟಿ