ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಫಕೀರಾ

- ಗಿರೀಶ್ ಜಕಾಪುರೆ -


ಈ ಕಾದಂಬರಿಯಲ್ಲಿ ಫಕೀರಾ ಒಬ್ಬ ದಲಿತ ವೀರ. ದಲಿತರು ತಮ್ಮನ್ನು ತಾವು ಉಚ್ಛವರ್ಗದವರ ಆಳುಗಳು ಎಂದುಕೊಂಡಿದ್ದ ಕಾಲದ ಆ ದಿನಗಳಲ್ಲಿ ಫಕೀರಾ ದಲಿತರ ಅಸ್ಮಿತೆಯನ್ನು ಬಡಿದೆಬ್ಬಿಸುತ್ತಾನೆ. ಒಬ್ಬ ದಲಿತ ಎಂಥ ಸಾಹಸ ಮಾಡಬಲ್ಲನು ಎಂಬುದನ್ನು ಫಕೀರಾ ಮತ್ತು ಆತನ ತಂದೆ ರಾಣೋಜಿ ಮಾಡಿ ತೋರಿಸುತ್ತಾರೆ. ಉಚ್ಛವರ್ಗದವರು ಜಾತಿ ಭೇದಗಳನ್ನು ಮರೆತು ದಲಿತ ಓಣಿಗಳಲ್ಲಿ ಬರುವಂತೆ ಮಾಡಿ ಮಹಾಪರಿವರ್ತನೆಗೆ ನಾಂದಿ ಹಾಡುತ್ತಾನೆ. ಅವನ ಎದೆಗಾರಿಕೆ, ತ್ಯಾಗ, ಬ್ರಿಟೀಷರ ಅಟ್ಟಹಾಸವನ್ನು ಮೆಟ್ಟಿನಿಲ್ಲುತ್ತ, ಸ್ವಾರ್ಥಕ್ಕಾಗಿ ಬಡಿದಾಡದೇ ತನ್ನ ಇಡೀ ಜನಾಂಗವನ್ನು ಬದುಕಿಸಲು, ಇಡೀ ಊರಿನ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸುವ ಪರಿಯನ್ನು ಕಾದಂಬರಿ ಚಿತ್ರಿಸುತ್ತದೆ.
ಪುಸ್ತಕದ ಕೋಡ್ KBBP 0251
ಪ್ರಕಾರಗಳು ಕಾದಂಬರಿ
ಲೇಖಕರು ಗಿರೀಶ್ ಜಕಾಪುರೆ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 304

ಬಯಕೆ ಪಟ್ಟಿ