ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಸ್ವೇಚ್ಛೆ

- ವೀರಭದ್ರೇಗೌಡ -


ಈ ಕಾದಂಬರಿಯಲ್ಲಿ ಬರುವ ಅರುಣ ಇಂದಿನ ಮಧ್ಯಮ ವರ್ಗದ ಆಧುನಿಕ ಸ್ತ್ರೀ. ಈ ವರ್ಗದ ಸ್ತ್ರೀಯರು ವಿದ್ಯಾವಂತರಾಗುತ್ತಿದ್ದು, ವಿವಿಧ ಉದ್ಯೋಗಗಳನ್ನು ನಿರ್ವಹಿಸಿ ಆರ್ಥಿಕವಾಗಿ ಸ್ವತಂತ್ರರಾಗುತ್ತಿದ್ದಾರೆ. ವಿದ್ಯಾಭ್ಯಾಸ, ಉದ್ಯೋಗದಲ್ಲಿ ಸ್ತ್ರೀಯರನ್ನು ಗುರುತಿಸುವುದು, ಸ್ವಲ್ಪ ಮಟ್ಟಿಗೆ ಬೆಳೆದವರ ಸಂದರ್ಭದಲ್ಲಿ ಸ್ವತಂತ್ರವಾಗಿ ಯೋಚಿಸಬಲ್ಲ ಬುದ್ಧಿ, ಅದರಿಂದ ಬೆಳೆದ ಆತ್ಮಗೌರವ, ಇವೆಲ್ಲವೂ ಅವರ ಮೇಲೆ ಪ್ರಭಾವ ಬೀರಿ ಅವರ ಸ್ವಭಾವವನ್ನು ಬದಲಾಯಿಸಿ, ಕುಟುಂಬದ ಬಗ್ಗೆ, ಸಂಪ್ರದಾಯ ಭಾವಗಳಿಗೆ ತಲೆಬಾಗಿಸದ ಹೊಸ ಯೋಚನೆಗಳು ಪ್ರಾರಂಭವಾಗಿ, ಸಾಂಸ್ಕೃತಿಕವಾಗಿ ಸ್ತ್ರೀಯರ ಮೇಲೆ ಬಲವಂತವಾಗಿ ಹೇರಲ್ಪಟ್ಟ ವಿಚಾರಗಳನ್ನು ಪ್ರಶ್ನಿಸಲು ಆರಂಭಿಸುತ್ತಾರೆ. ಇದರಿಂದ ಘರ್ಷಣೆಗಳು ಪ್ರಾರಂಭವಾಗುತ್ತವೆ. ತಮ್ಮನ್ನು ತಾವು ಪೋಷಿಸಿಕೊಂಡು, ರಕ್ಷಿಸಿಕೊಳ್ಳಬಲ್ಲವೆಂಬ ಸ್ತ್ರೀಯರು, ದೃಷ್ಟಿಯನ್ನು ತಮ್ಮ ಮೇಲಿಂದ ಸಮಾಜದ ಮೇಲೆ ಹೊರಳಿಸುತ್ತಾರೆ. ಇಂಥ ಹೊಸ ಸ್ತ್ರೀಯರು ಅನುಭವಿಸುವ ಕ್ಷೋಬೆಯನ್ನು, ಎದುರಿಸಬೇಕಾದ ಸಮಸ್ಯೆಗಳನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
ಪುಸ್ತಕದ ಕೋಡ್ KBBP 0250
ಪ್ರಕಾರಗಳು ಕಾದಂಬರಿ
ಲೇಖಕರು ವೀರಭದ್ರೇಗೌಡ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 100/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 80/-
ಪುಟಗಳು 204

ಬಯಕೆ ಪಟ್ಟಿ