ಟೆಂಡರ್ ಪ್ರಕಟಣೆ - ಹೆಚ್ಚಿನ ಮಾಹಿತಿಗೆ | ಗಿರಿಜನ ಉಪಯೋಜನೆಯಡಿ (ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ) ಫೆಲೋಷಿಪ್ ಅರ್ಜಿ - ಹೆಚ್ಚಿನ ಮಾಹಿತಿಗೆ | ಕುವೆಂಪು ಜನ್ಮದಿನಾಚರಣೆ - ಹೆಚ್ಚಿನ ಮಾಹಿತಿಗೆ | ಕುವೆಂಪು ಸಾಹಿತ್ಯ ಸಂವಾದ ಸಮಾವೇಶ ಕಾರ್ಯಕ್ರಮ - ಹೆಚ್ಚಿನ ಮಾಹಿತಿಗೆ | ಆಫ್ರಿಕನ್ ಸಾಹಿತ್ಯ – ಪುಸ್ತಕದ ಬಿಡುಗಡೆ ಹಾಗೂ ವಿಚಾರಸಂಕಿರಣ - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪುಸ್ತಕ ಬಹುಮಾನ ಯೋಜನೆಯಡಿ ಪುಸ್ತಕ ಸ್ವೀಕೃತಿ ಕೊನೆಯ ದಿನಾಂಕವನ್ನು ದಿನಾಂಕ:15.09.2017 ರಿಂದ 30.09.2017ರ ವರೆಗೆ ವಿಸ್ತರಿಸಲಾಗಿದೆ. - ಹೆಚ್ಚಿನ ಮಾಹಿತಿಗೆ | ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2016ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು. - ಹೆಚ್ಚಿನ ಮಾಹಿತಿಗೆ | ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ Android App - ಹೆಚ್ಚಿನ ಮಾಹಿತಿಗೆ | ಹಿಂದಿನ ಮೂರು ವರ್ಷದ ಅವಧಿಯಲ್ಲಿನ ಪ್ರಕಟಣೆಗಳ ಪುಸ್ತಕ ಸೂಚಿ... - ಹೆಚ್ಚಿನ ಮಾಹಿತಿಗೆ | ಪ್ರಾಧಿಕಾರದ ಎಲ್ಲ ಪ್ರಕಟಣೆಗಳ ಲೋಕಾರ್ಪಣೆ ಸಮಾರಂಭ - ಹೆಚ್ಚಿನ ಮಾಹಿತಿಗೆ |

ಕಥೆಗಳು

ಯುಗದ ಹೆಜ್ಜೆ

- ಡಾ.ಎಂ.ಎಸ್.ವೀರಘಂಟಿಮಠ -


ಕುವೆಂಪು ಭಾಷಾಭಾರತಿ ಪ್ರಾಧಿಕಾರವು 2014ರ ಸೆಪ್ಟೆಂಬರ್ ಮಾಹೆಯಲ್ಲಿ ಹಮ್ಮಿಕೊಂಡಿದ್ದ ಅನುವಾದ ಕಾರ್ಯಾಗಾರದಲ್ಲಿ ಆಯ್ಕೆ ಮಾಡಿದ, 16 ಜನ ಹಿಂದಿ ಮಹಿಳಾ ಶ್ರೇಷ್ಠ ಕಥೆಗಾರ್ತಿಯರ ಕನ್ನಡ ಅನುವಾದ ಸಂಕಲನವೇ ‘ಯುಗದ ಹೆಜ್ಜೆ’. ಇಲ್ಲಿನ ಎಲ್ಲಾ ಮೂಲ ಕಥಗಳ ಲೇಖಕರು ಸ್ತ್ರೀಯರೇ ಆಗಿರುವುದರಿಂದ ಸಹಜವಾಗಿಯೇ ಕಥೆಗಳೆಲ್ಲವೂ ಸ್ತ್ರೀ ಕೇಂದ್ರಿತವಾಗಿಯೇ ಇವೆ. ಗೌರಿ, ಭೂಮಿಸುತೆ, ನಿಮ್ಮ ಚಿಕ್ಕಮಗಳು, ಸುನಂದಾ ಹುಡುಗಿಯ ದಿನಚರಿ ಮುಂತಾದ ಕಥೆಗಳಲ್ಲಿ ಹೆಣ್ಣುಗಳು ಎಂಥೆಂಥಾ ಹತಾಶ, ದರಿದ್ರ, ದುರಂತ ಭಯಂಕರ ಸ್ಥಿತಿಗಳನ್ನು , ಎದುರಿಸುವ ಸನ್ನಿವೇಶಗಳನ್ನು ದೃಶ್ಯೀಕರಿಸುತ್ತವೆ. ಅಲ್ಲದೆ ಇಲ್ಲಿನ ಕಥೆಗಳಲ್ಲಿ ರಾಜಕೀಯ ಸ್ಥಿತ್ಯಂತರದಿಂದ ಉಂಟಾಗುವ ಯಾತನಾಮಯ ಬದುಕು, ಗಂಡನ ದೌರ್ಜನ್ಯಕ್ಕೊಳಗಾದರೂ ಆತನಿಗಾಗಿ ಮರುಗುವ ಹೆಣ್ಣು, ರಾಜಿಯಾಗುವ ಮುಗ್ಧ ಗ್ರಾಮೀಣ ಜನತೆಯ ಜಂಜಡಗಳು, ಮಾನವೀಯತೆ, ಪರಿಸರ ಕಾಳಜಿಗಳನ್ನು ತೋರಿಸುವ ವೈವಿಧ್ಯತೆ, ವೈಶಿಷ್ಟ್ಯಗಳನ್ನು ಒಳಗೊಂಡ ಇಲ್ಲಿನ ಕತೆಗಳು ವಾಸ್ತವ ಜಗತ್ತನ್ನು ಕಣ್ಣ ಮುಂದಿರಿಸುತ್ತವೆ.
ಪುಸ್ತಕದ ಕೋಡ್ KBBP 0242
ಪ್ರಕಾರಗಳು ಕಥೆಗಳು
ಲೇಖಕರು ಡಾ.ಎಂ.ಎಸ್.ವೀರಘಂಟಿಮಠ
ಭಾಷೆ ಕನ್ನಡ
Published 2016
ಬೆಲೆ 150/-
ರಿಯಾಯಿತಿ 15%
ಪಾವತಿಸಬೇಕಾದ ಮೊತ್ತ ₹ 128/-
ಪುಟಗಳು 288

ಬಯಕೆ ಪಟ್ಟಿ