ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾವ್ಯ

ಗಾಳಿಹರಕೆಯ ಹಾಡು

ಅನುವಾದಿತ ಕವಿತೆಗಳು-2015

- ಅಬ್ಬಾಸ್ ಮೇಲಿನಮನಿ -


"೨೦೧೫ರಲ್ಲಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಅನುವಾದಿತ ಕವಿತೆಗಳ ಸಂಗ್ರಹವೇ ಗಾಳಿ ಹರಕೆಯ ಹಾಡು ಕೃತಿ. ಆಧುನಿಕ ನಾಗರಿಕತೆಯ ಅಮಾನವೀಯ ಸ್ವರೂಪ ದರ್ಶನ ಮಾಡಿಸುವ ಇಲ್ಲಿಯ ಕವಿತೆಗಳಲ್ಲಿ ಮಾನವೀಯ ನೆಲೆಯೊಂದನ್ನು ಕಂಡುಕೊಳ್ಳುವ ಸನ್ನೆಯನ್ನು ನೀಡುತ್ತಿರುವ ಸೂಕ್ಷ್ಮವನ್ನು ಗಮನಿಸಬಹುದು. ನಾಗರಿಕತೆಯ ಇತಿಹಾಸದಲ್ಲಿ ಅತ್ಯಂತ ಶೋಷಣೆಗೊಳಗಾದ ವ್ಯಕ್ತಿ ಎಂದರೆ ಅದು ಹೆಣ್ಣು. ಇಲ್ಲಿನ ಕವಿತೆಗಳು ಅತ್ಯಂತ ಮೊನಚಾಗಿ, ಹೃದಯ ಸ್ಪರ್ಶಿಯಾಗಿ ಹೆಣ್ಣಿನ ತುಮುಲಗಳನ್ನು ದಟ್ಟವಾಗಿ ಕಟ್ಟಿಕೊಡುತ್ತದೆ. ಬಲಾಢ್ಯರು ತಮ್ಮ ದೌರ್ಜನ್ಯ, ಆಕ್ರಮಣಗಳಿಂದ ಅಮಾಯಕರನ್ನು ನಯವಾಗಿ ವಂಚಿಸಿ, ಸಾವು ನೋವುಗಳಿಗೆ, ಶೋಷಣೆ-ಅಪಮಾನಗಳಿಗೆ ಒಳಪಡಿಸುತ್ತಿದ್ದಾರೆ. ಎಲ್ಲೆಡೆಯೂ ಹುಸಿ ಭರವಸೆಗಳ ಆಶ್ವಾಸನೆ, ಸಂದಿಗ್ಧತೆಯ ತಳಮಳ, ಅದರ ನಡುವೆಯೂ ಜೀವ ಪ್ರೀತಿಯ ಹಂಬಲ, ಯಾರನ್ನ್ನು ಸರಿಸದೆ ಎಲ್ಲರೊಳಗೆ ಒಂದಾಗಿ ಜೀವಂತವಾಗಿರಲು ಪ್ರೇರೇಪಿಸುವ, ಆಧ್ಯಾತ್ಮದ ಸತ್ಯ ದರ್ಶನದಿಂದ ಕೂಡಿದ ಇಲ್ಲಿನ ಕವಿತೆಗಳು ಮುದುಡಿದ ಮನಸುಗಳಿಗೆ ಬೆಳಕು ಹನಿಸುತ್ತವೆ."
ಪುಸ್ತಕದ ಕೋಡ್ KBBP 0239
ಪ್ರಕಾರಗಳು ಕಾವ್ಯ
ಲೇಖಕರು ಅಬ್ಬಾಸ್ ಮೇಲಿನಮನಿ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 100/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 80/-
ಪುಟಗಳು 220

ಬಯಕೆ ಪಟ್ಟಿ