ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2019ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸಿರುವ ಕುರಿತು - ಹೆಚ್ಚಿನ ಮಾಹಿತಿಗೆ | ಸಂವಿಧಾನ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾಡುವ ಕುರಿತು - ಹೆಚ್ಚಿನ ಮಾಹಿತಿಗೆ | ಎಲ್ಲಾ ಪುಸ್ತಕಗಳಿಗೂ ೫೦% ರಿಯಾಯಿತಿ... - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ತಾಳೆಗರಿ

- ಡಾ.ಹೆಚ್.ಹೆಸ್.ಅನುಪಮಾ -


ಬಾಮಾ ಎಂಬ ಬರಹನಾಮದಿಂದ ಫಾಸ್ಟಿನಾ ಸೂಸೈರಾಜ್ ಅವರು ತಮಿಳಿನಲ್ಲಿ ಬರೆದ ಆತ್ಮಕಥಾನಕ ‘ಕರುಕ್ಕು’ವನ್ನು ಲಕ್ಷ್ಮೀಹೋಲ್ ಸ್ಟ್ರಾಮ್ ಅವರು ಇಂಗ್ಲಿಷಿಗೆ ಅನುವಾದಿಸಿದ್ದು ಅದನ್ನುಡಾ. ಎಚ್.ಎಸ್. ಅನುಪಮಾ ಅವರು ‘ತಾಳೆಗರಿ' ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಕರುಕ್ಕು ಎಂದರೆ ತಾಳೆಗರಿ ಎಂದರ್ಥ. ದಲಿತರ ಬದುಕು ಹೇಗೆ ಅನಿವಾರ್ಯವಾಗಿ ಗಾಯಗೊಳ್ಳುತ್ತಾ, ಮಾಯುತ್ತಾ ಮತ್ತೆ ಗಾಯಗೊಳ್ಳುತ್ತದೆ ಎಂಬುದನ್ನು ತಾಳೆಗರಿಗೆ ಹೋಲಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಕ್ರೈಸ್ತ ದಲಿತರ ಬದುಕಿನ ವಿವಿಧ ಆಯಾಮಗಳನ್ನುನೋಡಬಹುದು. ಪರಯ್ಯಾ ಪಲ್ಲ–ಚಾಳಿಯಾರ್-ನಾಡಾರ್-ನಾಯ್ಕರ್ ಸಮುದಾಯಗಳು, ಸಮುದಾಯಗಳ ನಡುವಿನ ಅಂತರ್ಸಂಬಂಧಗಳು ಹಾಗು ಬಿಕ್ಕಟ್ಟುಗಳು, ಮಕ್ಕಳ ಶಿಕ್ಷಣ, ದಲಿತರ ನಂಬಿಕೆ-ಜಗಳ-ಪ್ರೇಮ-ಧಾರ್ಮಿಕತೆ, ಕ್ಯಾಥೊಲಿಕ್ ಚರ್ಚಿನ ಪಾದ್ರಿಗಳು, ಸನ್ಯಾಸಿನಿಯರು, ಕ್ರೈಸ್ತ ಕುಟುಂಬಗಳ ಮೇಲೆ ಚರ್ಚಿಗಿರುವ ಹಿಡಿತ, ಕ್ರೈಸ್ತ ಸಮುದಾಯದೊಳಗಿನ ಜಾತಿ ತಾರತಮ್ಯ, ಪೊಲೀಸರ ದೌರ್ಜನ್ಯ, ಕ್ರೈಸ್ತ ಸನ್ಯಾಸಿನಿಯರ ಕಾನ್ವೆಂಟ್ ಲೋಕದ ಒಳಹೊರಗುಗಳನ್ನು, ಒಂದು ಮಗು ಕ್ರೈಸ್ತ ಧಾರ್ಮಿಕ ವ್ಯಕ್ತಿತ್ವವನ್ನು ಹೊಂದುತ್ತಲೇ ದಲಿತ ಮನಸ್ಸಾಗಿ ರೂಪುಗೊಳ್ಳುವ ಜಾಗೃತ ಪಯಣವನ್ನು ಈ ಕೃತಿ ಕಟ್ಟಿಕೊಡುತ್ತದೆ.
ಪುಸ್ತಕದ ಕೋಡ್ KBBP 0218
ಪ್ರಕಾರಗಳು ಕಾದಂಬರಿ
ಲೇಖಕರು ಡಾ.ಹೆಚ್.ಹೆಸ್.ಅನುಪಮಾ
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 125/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 63/-
ಪುಟಗಳು 148

ಬಯಕೆ ಪಟ್ಟಿ