ವಿಚಾರ ಸಾಹಿತ್ಯ

ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ

- ಡಾ. ಎಸ್. ಸಿರಾಜ್ ಅಹಮದ್ -


ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಜಾಗತಿಕ ಮಟ್ಟದ ಬರಹಗಾರರು ಚಿಂತಕರುಗಳ ಜೊತೆಗೆ ಭಾರತೀಯ ಭಾಷೆಗಳ ಲೇಖಕರು ಚಿಂತಕರನ್ನು ಕನ್ನಡಕ್ಕೆ ಪರಿಚಯಿಸುವ ಆಶಯದಿಂದ ಏರ್ಪಡಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡನೆಯಾದ ಪ್ರಬಂಧಗಳ ಕನ್ನಡಾನುವಾದಗಳು ಇಲ್ಲಿ ಸಂಗ್ರಹಗೊಂಡಿವೆ. ಬಹುಭಾಷಿಕತೆಯಿಂದ ಬಹು ಸಾಂಸ್ಕೃತಿಕತೆಗಳ ಕಡೆಗೆ ನಡೆಯುವ ಅರ್ಥಪೂರ್ಣ ಚಲನೆಗಳಿಗೆ ಅನುವಾದ ಕ್ರಿಯೆಯೇ ಮೂಲ ಪ್ರೇರಣೆ. ಭಾರತದ ಹಲವು ಭಾಷಿಕ, ಸಾಹಿತ್ಯಕ ಸನ್ನಿವೇಶಗಳ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನವರೆಗೂ ಭಾರತದಾದ್ಯಂತ ನಡೆದ ನಡೆಯುತ್ತಿರುವ ಅನುವಾದದ ಸ್ವರೂಪ ಎಂತಹುದು, ಅದರ ಹಿಂದಿನ ಒತ್ತಾಸೆಗಳೇನು, ಸಾಂಸ್ಕೃತಿಕ ಪರಿಣಾಮಗಳೇನು, ಜೊತೆಗೆ ಭಾಷೆಗಳ ಪ್ರಮಾಣಿಕರಣ, ಬಹುಭಾಷಿಕ ಪರಿಸರದಲ್ಲಿ ಒಂದು ಭಾಷೆಯನ್ನು ಸ್ಥಿರಿಕರಿಸುವುದರಿಂದ ಆಗುವ ಸಮಸ್ಯೆಗಳು, ಅನುವಾದಗಳ ಮೂಲಕ ಸಾಧ್ಯವಾಗುತ್ತಿದೆ. ಭಾಷಿಕ ಒಡನಾಟಗಳಿಗೆ ಮುದ್ರಣ ತಂತ್ರಜ್ಞಾನ, ರಾಷ್ಟ್ರೀಯತೆ ಹಾಗೂ ಇಂಗ್ಲಿಷ್ ಭಾಷೆ-ಶಿಕ್ಷಣ ಕ್ರಮಗಳು ತಂದೊಡ್ಡಿರುವ ಅಪಾಯಗಳನ್ನು ಸೂಕ್ಷ್ಮವಾಗಿ ಹಲವು ನೆಲೆಗಳಲ್ಲಿ ಚರ್ಚಿಸಲಾಗಿದೆ.
ಪುಸ್ತಕದ ಕೋಡ್ KBBP 0214
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಾ. ಎಸ್. ಸಿರಾಜ್ ಅಹಮದ್
ಭಾಷೆ ಕನ್ನಡ
ಪ್ರಕಟಿತ ವರ್ಷ 2016
ಬೆಲೆ 150/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 75/-
ಪುಟಗಳು 286

ಬಯಕೆ ಪಟ್ಟಿ