ತಾಂತ್ರಿಕ ತೊಂದರೆಯಿಂದಾಗಿ ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. - ಹೆಚ್ಚಿನ ಮಾಹಿತಿಗೆ |

ಕಾದಂಬರಿ

ಸೂರ್ಯಕಾಂತಿಗಳ ಮಡಿಲಲ್ಲಿ

- ಡಾ. ವಿಜಯಾ ಸುಬ್ಬರಾಜ್ -


"ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಗೌರವ ಪ್ರಶಸ್ತಿ ಪುರಸ್ಕೃತರ ಮಾಲೆಯಡಿ ಪ್ರಕಟವಾಗಿರುವ ಸೂರ್ಯಕಾಂತಿಗಳ ಮಡಿಲಲ್ಲಿ ಕೃತಿಯು ಇರ್ವಿಂಗ್ ಸ್ಟೋನ್ ನ ‘ಲಸ್ಟ್ ಫಾರ್ ಲೈಫ್’ ಕಾದಂಬರಿಯ ಅನುವಾದವಾಗಿದೆ. ಈ ಕೃತಿಯು ವಿನ್ಸೆಂಟ್ ವಾನ್ಗೋನ ಜೀವನ ಚರಿತ್ರೆಯನ್ನು, ಕಲಾವಿದನ ಜೀವನವನ್ನು ಕಲೆಯಾಗಿ ರೂಪಿಸುತ್ತಾ ಚಿತ್ರವನ್ನು - ಮೀಮಾಂಸೆಯನ್ನು ಸಾದರಪಡಿಸುವುದು, ಆತ ಬದುಕಿದ್ದ ಕಾಲದ ಜನ ಜೀವನವನ್ನು ಚಿತ್ರಿಸುತ್ತಾ ಅದರ ನಡುವೆ ವಿನ್ಸೆಂಟ್ ವಾನ್ಗೋನನ್ನು ಕಾಣಿಸುತ್ತದೆ. ಆರ್ಥಿಕ, ಸಾಮಾಜಿಕ, ಮಾನಸಿಕ ಒತ್ತಡಗಳ ಭಯಂಕರ ಪರಿಣಾಮಗಳ ಬೆಂಕಿಯಲ್ಲಿ ಬೇಯುತ್ತಾ, ಅಸ್ತಿತ್ವಕ್ಕಾಗಿ ಪ್ರತಿಕೂಲ ಪರಿಸ್ಥಿತಿಗಳಿಗೆ ಎದುರಾಗಿ ಈಜುತ್ತಾ, ಸಂಘರ್ಷಗಳನ್ನು ಬದುಕಿನ ಭಾಗವಾಗಿ ಸ್ವೀಕರಿಸುತ್ತ ತನ್ನ ಸುತ್ತಲಿನ ಸಮಾಜದಿಂದ ಅವಮಾನ, ಅವಹೇಳನ, ತಿರಸ್ಕಾರಗಳ ನಡುವೆಯೂ ಮಾನವೀಯತೆಯನ್ನು ಉಳಿಸಿಕೊಂಡು, ಮನೋವಿಕಾರ, ವಿಕ್ಷಿಪ್ತ ವ್ಯಕ್ತಿತ್ವಗಳ ಮಧ್ಯದಲ್ಲೆ ತನ್ನೊಳಗಿನ ಕಲಾವಿದನನ್ನು ಬಡಿದೆಬ್ಬಿಸಿದ ವಿನ್ಸೆಂಟ್ ವಾನ್ಗೋನ ಜೀವನ ಚಿತ್ರಣವನ್ನು ಕಟ್ಟಿಕೊಡುತ್ತದೆ.
"
ಪುಸ್ತಕದ ಕೋಡ್ KBBP 0208
ಪ್ರಕಾರಗಳು ಕಾದಂಬರಿ
ಲೇಖಕರು ಡಾ. ವಿಜಯಾ ಸುಬ್ಬರಾಜ್
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 350/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 175/-
ಪುಟಗಳು 609

Covid 19 ಸೋಂಕು ಹಾವಳಿಯಿಂದಾಗಿ ಕೆಲ ಪ್ರದೇಶಗಳಲ್ಲಿ ಪೋಸ್ಟಲ್ / ಕೋರಿಯರ್ ಸೇವೆ ಇನ್ನೂ ಪೂರ್ಣವಾಗಿ ಸಮರ್ಪಕವಾಗಿ ನಿಗದಿತ ಸಮಯದಲ್ಲಿ ಪುಸ್ತಕಗಳನ್ನು ತಲುಪಿಸದೇ ಇರುವುದನ್ನು ಗಮನಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ
ಆನ್ ಲೈನ್ ಮಾರಾಟ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.