ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳ ಪರಿಭಾಷಾ ಕೋಶ

- ಡಾ. ಎಂ. ಚಂದ್ರ ಪೂಜಾರಿ ಡಾ.ಟಿ.ಆರ್. ಚಂದ್ರಶೇಖರ್ ಡಾ. ವಿ.ಎಸ್. ಶ್ರೀಧರ್ -


"ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳಲ್ಲಿ ಬಳಸಲ್ಪಡುವ ಕೆಲವೊಂದು ಪರಿಭಾಷೆಗಳಿಗೆ ವಿದ್ಯಾರ್ಥಿ ಮತ್ತು ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ವಿವರಣೆಯನ್ನು ಈ ಪುಸ್ತಕವು ಒಳಗೊಂಡಿದೆ. ಶೈಕ್ಷಣಿಕ ಚರ್ಚೆಗಳಲ್ಲಿ ಅಥವಾ ಬರವಣಿಗೆಯಲ್ಲಿ ಈ ಪಾರಿಭಾಷಿಕ ಪದಗಳನ್ನು ಬಳಸುವಾಗಿನ ವಿಭಿನ್ನ ಅರ್ಥ ವ್ಯಾಪ್ತಿ, ಸಮಾಜ ವಿಜ್ಞಾನದ ಓದು ಮತ್ತು ಬೋಧನೆಯಲ್ಲಿ ಪರಿಭಾಷೆಗಳನ್ನು ರೂಪಿಸಿಕೊಂಡು ಬಳಸುವುದರ ತೊಡಕಿನ ಬಗ್ಗೆ ಈ ಪದಕೋಶ ನೆರವಾಗುತ್ತದೆ. ದಿನನಿತ್ಯದ ಚರ್ಚೆಗಳಲ್ಲಿ, ಓದಿನಲ್ಲಿ, ಬರವಣಿಗೆಯಲ್ಲಿ ಬಳಸುವ ಅಧಿಕಾರ, ಅಭಿವೃದ್ಧಿ, ಅಸಂಘಟಿತ ವಲಯ,ಉತ್ಪಾದನೆ, ಉದಾರವಾದ, ಕೋಮುವಾದ, ದಲಿತ, ದೇಶೀಯತೆ, ಪರಂಪರೆ, ಪರಕೀಯತೆ ಮುಂತಾದ ೬೬ ಪಾರಿಭಾಷಿಕ ಪದಗಳ ವಿವರಣೆ, ಅವುಗಳ ಉಪಯೋಗ, ಅವುಗಳನ್ನು ಬಳಸುವಾಗ ಅವುಗಳ ವಿಶಿಷ್ಟತೆಯನ್ನು ಗುರುತಿಸುವ ಮತ್ತು ಆಯಾ ಪರಿಭಾಷೆಗಳ ವ್ಯುತ್ಪತ್ತಿಗಿಂತಲೂ ಸದ್ಯದ ಅರ್ಥವನ್ನು ನೀಡುವ ಈ ಗ್ರಂಥ ಉಪಯುಕ್ತ ಕೃತಿಯಾಗಿದೆ.
"
ಪುಸ್ತಕದ ಕೋಡ್ KBBP 0205
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ಡಾ. ಎಂ. ಚಂದ್ರ ಪೂಜಾರಿ ಡಾ.ಟಿ.ಆರ್. ಚಂದ್ರಶೇಖರ್ ಡಾ. ವಿ.ಎಸ್. ಶ್ರೀಧರ್
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 150/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 120/-
ಪುಟಗಳು 3305

ಬಯಕೆ ಪಟ್ಟಿ