ಅನುವಾದಿತ ಪುಸ್ತಕಗಳಿಗೆ ನೀಡಲಿರುವ 2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗೆ ಪುಸ್ತಕಗಳನ್ನು ಆಹ್ವಾನಿಸುವ ಕುರಿತು - ಹೆಚ್ಚಿನ ಮಾಹಿತಿಗೆ |

ವಿಚಾರ ಸಾಹಿತ್ಯ

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು

ಸಂಪುಟ-7 (ಪರಿಷ್ಕರಣೆ) 2016

- ವಿವಿಧ ಅನುವಾದಕರು -


ಈ ಸಂಪುಟದಲ್ಲಿ ಅಸ್ಪೃಶ್ಯರ ರಾಜಕೀಯ ಮತ್ತು ಸಾಮಾಜಿಕ ಅಸ್ತಿತ್ವದಲ್ಲಿ ಕಾಂಗ್ರೆಸ್ ಮತ್ತು ಗಾಂಧೀಜಿಯವರ ನಡೆಗಳು, ರಾಜಕೀಯದಲ್ಲಿ ಅಸ್ಪೃಶ್ಯರಿಗೆ ಪ್ರತಿನಿಧಿತ್ವ ನೀಡುವಲ್ಲಿ ಕಾಂಗ್ರೆಸ್ ಅನುಸರಿಸಿದ ಚುನಾವಣಾ ತಂತ್ರಗಳು, ಜಾತಿ ವ್ಯವಸ್ಥೆಯನ್ನು ಉಳಿಸಿಕೊಂಡು ಅಸ್ಪೃಶ್ಯತೆಯನ್ನು ಅಳಿಸಿಹಾಕಬೇಕೆಂಬ ಗಾಂಧೀಜಿಯವರ ಅಭಿಪ್ರಾಯ, ಗಾಂಧಿಯವರ ಅಸ್ಪೃಶ್ಯತಾ ನಿವಾರಣಾ ಆಂದೋಲನ, ಅಸ್ಪೃಶ್ಯರ ರಾಜಕೀಯ ಬೇಡಿಕೆಗಳ ಬಗ್ಗೆ ಹಿಂದೂಗಳ ವಿರೋಧ, ಈ ಬಗ್ಗೆ ವಿದೇಶಿಯರಲ್ಲಿ ಉಂಟಾಗಿದ್ದ ತಪ್ಪು ಕಲ್ಪನೆಗಳ ಬಗ್ಗೆ ಚರ್ಚಿಸಲಾಗಿದೆ. ಗಾಂಧಿಯವರು ಅಸ್ಪೃಶ್ಯರ ಸಮಸ್ಯೆಯನ್ನು ನೈತಿಕತೆಯ ಆಧಾರದ ಮೇಲೆ, ಹಿಂದೂಗಳ ಮನಃಪರಿವರ್ತನೆ ಮಾಡಿ ಪರಿಹರಿಸಲು ಪ್ರಯತ್ನಿಸಿದರೆ, ಡಾ|| ಬಿ.ಆರ್.ಅಂಬೇಡ್ಕರ್ ಅವರು ಅದನ್ನು ಸಾಂವಿಧಾನಿಕ ಸಂರಕ್ಷಣೆಗಳ ಮೂಲಕ ಪರಿಹರಿಸಬೇಕಾದ ರಾಜಕೀಯ ವಿಧಾನಕ್ಕೆ ಪ್ರಯತ್ನಿಸುತ್ತಿದ್ದರು. ಹೀಗೆ ಸಾಮಾಜಿಕ ಉದ್ದೇಶಕ್ಕಾಗಿ ಹೋರಾಡಿದ ಮಹಾನ್ ಚೇತನಗಳಾದ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ವಿಭಿನ್ನ ಮಾರ್ಗಗಳು ಮತ್ತು ಭಿನ್ನಾಭಿಪ್ರಾಯಗಳು ಹೇಗಿದ್ದವು ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.
ಪುಸ್ತಕದ ಕೋಡ್ KBBP 0018
ಪ್ರಕಾರಗಳು ವಿಚಾರ ಸಾಹಿತ್ಯ
ಲೇಖಕರು ವಿವಿಧ ಅನುವಾದಕರು
ಭಾಷೆ ಕನ್ನಡ
ಪ್ರಕಟಿತ ವರ್ಷ 2015
ಬೆಲೆ 50/-
ರಿಯಾಯಿತಿ 20%
ಪಾವತಿಸಬೇಕಾದ ಮೊತ್ತ ₹ 40/-
ಪುಟಗಳು 481

ಬಯಕೆ ಪಟ್ಟಿ ಲಭ್ಯವಿಲ್ಲ