ಜೀವನ ಚರಿತ್ರೆ

ಬಾಲಗಂಗಾಧರತಿಲಕ್-ಜೀವನಚರಿತ್ರೆ

- ಎಸ್. ಅನಂತನಾರಾಯಣ -


"ಭಾರತದ ಸ್ವಾತಂತ್ರ್ಯಕ್ಕಾಗಿ ಜೀವನದುದ್ದಕ್ಕೂ ಹೋರಾಡಿದ ಅನೇಕ ಪುಣ್ಯಜೀವಿಗಳಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಪ್ರಮುಖರಾದವರು. ಸ್ವರಾಜ್ಯವು ನನ್ನ ಆಜನ್ಮಸಿದ್ಧ ಹಕ್ಕು ಎಂದರು, ಹೋರಾಟದಲ್ಲಿ ತಮ್ಮ ವೈಯಕ್ತಿಕ ಜೀವದಲ್ಲಿ ಕಷ್ಟಗಳ ಸುರಿಮಳೆಯನ್ನೇ ಆಹ್ವಾನಿಸಿಕೊಂಡವರು ತಿಲಕರು. ಅವರ ಹೃದಯದ ಶ್ರದ್ಧೆ ದೇಶಭಕ್ತಿಗಷ್ಟೇ ಸೀಮಿತವಾಗಿಸದೆ ಉತ್ತಮ ಪ್ರಪಂಚವನ್ನು ನಿರ್ಮಿಸಲು ದುಡಿಯಿತು. ಶಾಲೆ, ಕಾಲೇಜುಗಳನ್ನು ಕಟ್ಟಿ ಆದರ್ಶ ವಿದ್ಯಾಸಂಸ್ಥೆಗಳನ್ನಾಗಿ ಮಾಡಿದರು. ಕ್ಷಾಮಪರಿಹಾರ ಕಾರ್ಯಗಳಲ್ಲಿ ತಾವು ಶೇ. 80ರಷ್ಟು ನಷ್ಟವನ್ನು ಅನುಭವಿಸಿ ನೂಲನ್ನು ನೇಕಾರರಿಗೆ ಒದಗಿಸಿದರು, ಧಾರ್ಮಿಕ ಆಚರಣೆಗಳನ್ನು ದೇಶಕಟ್ಟುವ ಕೆಲಸಕ್ಕಾಗಿ ಬಳಸಿಕೊಂಡರು, ಪಾನನಿರೋಧಕ್ಕಾಗಿ ಹೋರಾಡಿದರು, ಭಾರತದ ಹೊಸ ಹುಟ್ಟಿನ ರಾಷ್ಟ್ರೀಯತೆಯ ಸ್ಫೂರ್ತಿ ಮತ್ತು ಪ್ರತಿನಿಧಿಗಳಾಗಿದ್ದರು ಇವೆಲ್ಲಾ ವಿಷಯಗಳೂ ಈ ಕೃತಿಯಲ್ಲಿ ನಿಚ್ಚಳವಾಗಿ ಪ್ರತಿಪಾದಿಸಲ್ಪಟ್ಟಿವೆ."
ಪುಸ್ತಕದ ಕೋಡ್ KBBP 0175
ಪ್ರಕಾರಗಳು ಜೀವನ ಚರಿತ್ರೆ
ಲೇಖಕರು ಎಸ್. ಅನಂತನಾರಾಯಣ
ಭಾಷೆ ಕನ್ನಡ
ಪ್ರಕಟಿತ ವರ್ಷ 2009
ಬೆಲೆ 200/-
ರಿಯಾಯಿತಿ 30%
ಪಾವತಿಸಬೇಕಾದ ಮೊತ್ತ ₹ 140/-
ಪುಟಗಳು 654

ಬಯಕೆ ಪಟ್ಟಿ