ಕಾದಂಬರಿ

ಭೂಗರ್ಭಯಾತ್ರೆ

- ಎಂ. ಗೋಪಾಲಕೃಷ್ಣ ಅಡಿಗ -


"ಫ್ರೆಂಚ್ ಭಾಷೆಯಲ್ಲಿ ವೈಜ್ಞಾನಿಕ ಲೇಖನಗಳನ್ನು ಬರೆಯುವವರಲ್ಲಿ ಮುಖ್ಯರೆಂದು ಪರಿಗಣಿತರಾಗಿರುವ ಜೂಲ್ಸ್ ವೆರ್ನ್ ಅವರ ಎ ಜರ್ನಿ ಟು ದ ಸೆಂಟರ್ ಆಫ್ ದ ಅರ್ತ್ ಎಂಬ ರೋಚಕವಾದ ಕೃತಿಯ ಸಂಗ್ರಹಾನುವಾದ ಈ ಕೃತಿ. ಅನುವಾದಕರು ಕನ್ನಡದ ನವ್ಯಪಂಥದ ಪ್ರವರ್ತಕರಲ್ಲಿ ಒಬ್ಬರಾದ ಪ್ರೊ. ಗೋಪಾಲಕೃಷ್ಣ ಅಡಿಗರು. ಈ ಕತೆಯಲ್ಲಿ ವಿಜ್ಞಾನಿಯೊಬ್ಬ ತನಗೆ ಸಿಕ್ಕಿದ ಒಂದು ಸಣ್ಣ ಸೂಚನೆಯ ಮೇರೆಗೆ ಭೂಗರ್ಭದತ್ತ ಯಾತ್ರೆಮಾಡಲು ಜೊತೆಗಾರರೊಡನೆ ಹೊರಡುತ್ತಾನೆ. ಎಲ್ಲಾ ಕಷ್ಟಗಳನ್ನೂ ಸಹಿಸಿಕೊಂಡು ಅಗ್ನಿಪರ್ವತದ ಗುಂಡಿಯೊಳಕ್ಕೆ ಇಳಿದು ಅವರೆಲ್ಲರೂ ಹೋಗುತ್ತಾರೆ. ಆದರೂ ಅವರು ನೈಸರ್ಗಿಕ ಕಾರಣಗಳಿಂದಾಗಿ ಭೂಗರ್ಭವನ್ನು ತಲುಪಲು ಸಾಧ್ಯವಾಗದೆ ಅದೃಷ್ಟವಶದಿಂದ ಊರಿಗೆ ಹಿಂತಿರುಗುತ್ತಾರೆ. ಹಿಂದಕ್ಕೆ ಬಂದ ವಿಜ್ಞಾನಿ ಅತಿಯಾದ ಕೀರ್ತಿಯನ್ನು ಗಳಿಸುತ್ತಾನೆ.
"
ಪುಸ್ತಕದ ಕೋಡ್ KBBP 0138
ಪ್ರಕಾರಗಳು ಕಾದಂಬರಿ
ಲೇಖಕರು ಎಂ. ಗೋಪಾಲಕೃಷ್ಣ ಅಡಿಗ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 50/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 25/-
ಪುಟಗಳು 250

ಬಯಕೆ ಪಟ್ಟಿ