ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾವ್ಯ

ಗೀತಾಂಜಲಿ *

- ಎಂ.ಆರ್.ಸಿ. ನಾಗರಾಜನ್ -


"ವಿಶ್ವಕವಿಯೆಂದು ಪ್ರಸಿದ್ಧರಾಗಿದ್ದ ಗುರುದೇವ ರವೀಂದ್ರನಾಥ ಠಾಕೂರರಿಗೆ ವಿಶ್ವಮಾನ್ಯತೆಯನ್ನು ಮತ್ತು ಅವರ ಮೂಲಕ ಭಾರತಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ಗೀತಾಂಜಲಿ. ಗೀತಾಂಜಲಿಯ ಗೀತೆಗಳನ್ನು ನೇರವಾಗಿ ಬಂಗಾಳಿಯಿಂದ ಕನ್ನಡಕ್ಕೆ ತಂದಿರುವವರು ಎಂ.ಆರ್.ಸಿ. ನಾಗರಾಜನ್ ಅವರು. ಇದರಲ್ಲಿ ಒಟ್ಟು 157 ಗೀತೆಗಳಿವೆ. ಗುರುದೇವರ ಗೀತಗಳಲ್ಲಿ ಹಾಡುವುದು ನಿರ್ಬಲ ಹೃದಯಗಳಲ್ಲ, ಇಲ್ಲಿರುವುವು ವಿರಹಗೀತಗಳಲ್ಲ. ಜೀವನಕ್ಕೆ ಅಮರ ಸಂದೇಶವನ್ನು ನೀಡುವ, ಪ್ರೇರಣೆಯನ್ನು ನೀಡುವ, ಹೃದಯಗಳ ಕೊರತೆಗಳನ್ನು ನೀಗಿಸಬಲ್ಲಂತಹ ರಸಪೂರ್ಣತೆಯಿದೆ. ಇದು ವೇದಗಳಲ್ಲಿನ ಪೂರ್ಣಪ್ರಜ್ಞೆಯ ಸ್ರೋತವನ್ನು ಒಳಗೊಂಡಿದೆ. ವಿಶ್ವಾತ್ಮನಲ್ಲಿ ಒಂದಾಗುವ ಆತ್ಮನ ಹಂಬಲ ಇಲ್ಲಿ ಕಾಣುತ್ತದೆ. ಮತ್ತೆ ಮತ್ತೆ ಓದಿದಷ್ಟೂ ಅರ್ಥವಿಸ್ತಾರವನ್ನು ಪಡೆಯುತ್ತಾ ಹೋಗುತ್ತದೆ.
"
ಪುಸ್ತಕದ ಕೋಡ್ KBBP 0132
ಪ್ರಕಾರಗಳು ಕಾವ್ಯ
ಲೇಖಕರು ಎಂ.ಆರ್.ಸಿ. ನಾಗರಾಜನ್
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 55/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 28/-
ಪುಟಗಳು

ಬಯಕೆ ಪಟ್ಟಿ ಲಭ್ಯವಿಲ್ಲ