ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೊಸ 25 ಪುಸ್ತಕಗಳ ಮಾರಾಟದ ಕುರಿತು - ಹೆಚ್ಚಿನ ಮಾಹಿತಿಗೆ |

ಕಾವ್ಯ

ಕೂಡಿ ನಡೆವ ಲೇಖನಿ

- ವೆಂ. ಶ್ರೀನಿವಾಸ -


"ಇದು ಜ್ಞಾನಪೀಠಪ್ರಶಸ್ತಿ ಪುರಸ್ಕೃತ ತೆಲುಗಿನ ಕವಿ ಡಾ. ಸಿ. ನಾರಾಯಣ ರೆಡ್ಡಿಯವರ ಕವನಸಂಕಲನ ಕಲಸಿ ನಡಿಚೆ ಕಲಂನ ಅನುವಾದ. ಅನುವಾದವೂ ಕಾವ್ಯ ರೂಪದಲ್ಲಿಯೇ ಇದೆ. ಕವಿತೆಯು ಮೂಡುವ ಪ್ರಕ್ರಿಯೆಯನ್ನು ರೆಡ್ಡಿಯವರು ಹಿಡಿದಿಟ್ಟಿರುವ ಪರಿಗೆ ಈ ನನ್ನನ್ನು ಕುಡಿದ ಆಕಾಶ ಎಂಬ ಕವನವನ್ನು ನೋಡಿ - ಪ್ರಕೃತಿಯನ್ನು ಆಸ್ವಾದಿಸಿದರಷ್ಟೇ ಸಾಲದು, ನಾವು ನಮ್ಮನ್ನು ಪ್ರಕೃತಿಗೇ, ಅದರ ಅನಂತ ಶಕ್ತಿಗೇ ಅರ್ಪಿಸಿಕೊಳ್ಳಬೇಕು. ಹಾಗಾದಾಗ ನಮ್ಮ ಸೀಮಿತತೆಯು ಕಳೆದುಹೋಗಿ, ನಾವು ಅನಂತ ಆಕಾಶದಲ್ಲಿ ಹಾರಾಡುತ್ತಾ ಇರುತ್ತೇವೆ. ಕ್ಷಣಕ್ಕೊಂದು ಬಣ್ಣವನ್ನು ತಾಳುವ ಸಂಜೆಯ ಮೋಡಗಳಂತೆ ರಂಗುರಂಗಾಗಿ, ರಸವತ್ತಾಗಿ ನಮ್ಮಿಂದ ಕಾವ್ಯ ಹೊಮ್ಮುತ್ತದೆ ಎನ್ನುತ್ತಾರೆ ಕವಿ ಇದರಲ್ಲಿ. ಇಂತಹ ಕವನಗಳ ಸಂಕಲನವೇ ಈ ಕೃತಿ.
"
ಪುಸ್ತಕದ ಕೋಡ್ KBBP 0129
ಪ್ರಕಾರಗಳು ಕಾವ್ಯ
ಲೇಖಕರು ವೆಂ. ಶ್ರೀನಿವಾಸ
ಭಾಷೆ ಕನ್ನಡ
ಪ್ರಕಟಿತ ವರ್ಷ 2007
ಬೆಲೆ 40/-
ರಿಯಾಯಿತಿ 50%
ಪಾವತಿಸಬೇಕಾದ ಮೊತ್ತ ₹ 20/-
ಪುಟಗಳು 132

ಬಯಕೆ ಪಟ್ಟಿ